ಹುಬ್ಬಳ್ಳಿ: ಅತಿವೃಷ್ಟಿ ಪ್ರದೇಶಕ್ಕೆ ಕೇಂದ್ರ ನೆರೆ ಅಧ್ಯಯನ ಭೇಟಿ ನೀಡಿದ್ದು, ಹುಬ್ಬಳ್ಳಿ ತಾಲೂಕಿನ ಕಿರೇಸೂರಿ, ಹೆಬಸೂರ ಗ್ರಾಮದ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿದೆ.
ಹೌದು..ಅತಿವೃಷ್ಟಿ ಅಧ್ಯಯನ ತಂಡದ ಅಧಿಕಾರಿಗಳಾದ ಅಶೋಕ ಕುಮಾರ, ವಿ.ವಿ.ಶಾಸ್ತ್ರಿ ಬೆಣ್ಣೆಹಳ್ಳ ಪ್ರವಾಹಕ್ಕೆ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ಮಾಡಿದ್ದು, ಹತ್ತಿ, ಹೆಸರು, ಉದ್ದು, ಉಳ್ಳಾಗಡ್ಡಿ ಮತ್ತಿತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ , ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಓ ಡಾ.ಸುರೇಶ ಇಟ್ನಾಳ, ಜಂಟಿ ಕೃಷಿ ನಿರ್ದೇಶಕ ಡಾ.ರಾಜಶೇಖರ ಬಿಜಾಪುರ ಸಾಥ್ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Kshetra Samachara
08/09/2022 01:36 pm