ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆರೆ ಕೋಡಿ ಹರಿದು ಅನಾಹುತ: ಹೊಲ ಜಲಾವೃತ, ರಸ್ತೆ ಸಂಪರ್ಕ ಕಡಿತ

ಹುಬ್ಬಳ್ಳಿ: ರೈಲ್ವೆ ಇಲಾಖೆ ತನ್ನ ಬಳಕೆಗೆ 100 ವರ್ಷಗಳ ಹಿಂದೆಯೇ ಕಟ್ಟಿಸಿದ ಕೆರೆ, ಇದೀಗ ಉಪಯೋಗಕ್ಕೆ ಬಾರದೇ ಜನರ ಸಂಕಷ್ಟವನ್ನು ಹೆಚ್ಚಿಸಿದೆ.

ಹೌದು, ಹುಬ್ಬಳ್ಳಿ ತಾಲೂಕಿನ ದೇವರ ಗುಡಿಹಾಳದ ಕೆರೆ ತುಂಬಿ ಇದೀಗ ರೈತರು, ಸಾರ್ವಜನಿಕರಿಗೆ, ಸಂಕಷ್ಟ ತಂದೊಡ್ಡಿದೆ. ಈ ವರ್ಷ ಸುರಿದ ಮಳೆಯಿಂದ ಕೆರೆ ತುಂಬಿ ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿದೆ. ಕೆರೆಯ ಕೋಡಿ ಬಿಟ್ಟು ಅಪಾರ ಪ್ರಮಾಣದ ನೀರು ರೈತರ ಹೊಲಗಳಿಗೆ ನುಗ್ಗಿದೆ. ಇದರಿಂದ ದೇವರ ಗುಡಿಹಾಳ, ಪರಸಾಪುರ ನಡುವಿನ ರಸ್ತೆಯೇ ಕಿತ್ತು ಹೋಗಿದೆ. ಅಲ್ಲದೇ ಸೇತುವೆ ಕೂಡಾ ಹಾಳಾಗಿದ್ದು, ಇಲ್ಲಿ ಸರಿಯಾದ ರಸ್ತೆ ಸಂಪರ್ಕವಿಲ್ಲದೇ ಸಂಚರಿಸಲು ಜನ ಹೈರಾಣಾಗಿದ್ದಾರೆ.

ಈ ಎರಡು ಗ್ರಾಮಗಳಿಗೆ ಈ ಸೇತುವೆ ಪರ್ಯಾಯ ದಾರಿಯಾಗಿದ್ದರೂ ಇದೇ ಮಾರ್ಗವನ್ನು ಜನರು ಹೆಚ್ಚು ಅವಲಂಬಿಸಿದ್ದಾರೆ. ವಿಶೇಷವಾಗಿ ಕೃಷಿ ಕಾರ್ಯಕ್ಕೆ ರೈತರು ಹೆಚ್ಚು ಉಪಯೋಗ ಮಾಡುತ್ತಾರೆ. ಆದರೆ ಇದೀಗ ಅದೇ ರಸ್ತೆ ಮತ್ತು ಸೇತುವೆ ಹಾಳಾಗಿದ್ದು ಇದರಿಂದ ಈ ಎರಡು ಗ್ರಾಮಗಳ ನಡುವಿನ ಒಂದು ಸಂಪರ್ಕ ಕಡಿತಗೊಂಡಿದೆ.

ಒಟ್ಟಾರೆ ಇಷ್ಟೆಲ್ಲಾ ಸಮಸ್ಯೆ ಹೊಂದಿರುವ ಈ ಗ್ರಾಮಗಳ ಜನರ ಸಂಕಷ್ಟವನ್ನು ಶಾಸಕಿ ಕುಸುಮಾವತಿ ಶಿವಳ್ಳಿ ಅವರಿಗೆ ಹೇಳಿದರು ಕೂಡ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಶಾಸಕಿ ಶಿವಳ್ಳಿ ಅವರು ಈ ಸೇತುವೆಯನ್ನು ನಿರ್ಮಾಣ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ...

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ....

Edited By : Somashekar
Kshetra Samachara

Kshetra Samachara

16/08/2022 12:27 pm

Cinque Terre

40.64 K

Cinque Terre

0

ಸಂಬಂಧಿತ ಸುದ್ದಿ