ಕುಂದಗೋಳ: ಕಳೆದ ಸೋಮವಾರ ಜೂನ್ 13 ರಂದು ಕುಂದಗೋಳ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಲ್ಲಿಕಾರ್ಜುನ ಸೂಗಿ ಎಂಬುವವರ ಪಡೆದ ನಾಲ್ಕು ಚೀಲ ಶೇಂಗಾ ಬೀಜದಲ್ಲಿ ಒಂದು ಚೀಲದಲ್ಲಿ ಕಲುಷಿತ ಶೇಂಗಾ ಗಂಟ್ಟೊಂದು ಪೂರೈಕೆಯಾದ ಆರೋಪದ ಬಗ್ಗೆ ಸಹಾಯಕ ಕೃಷಿ ನಿರ್ದೇಶಕ ಸದಾಶಿವ ಕಾನೂರಿ ಪ್ರತಿಕ್ರಿಯಿಸಿ ಕಲುಷಿತ ಶೇಂಗಾ ಬೀಜದ ಚೀಲ ಪಡೆದು ಬೇರೊಂದು ಚೀಲ ನೀಡಲಾಗಿದೆ ಎಂದಿದ್ದಾರೆ.
ಹೌದು ! ಕಲುಷಿತ ಶೇಂಗಾ ಬೀಜ ಪೂರೈಕೆ ಆರೋಪದ ಕುರಿತು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಶೇಂಗಾ ಬೀಜದ ಚೀಲಗಳು ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟದಿಂದ ಪೂರೈಕೆಯಾಗಿವೆ. ಕಲುಷಿತ ಶೇಂಗಾ ಬೀಜ ಪೂರೈಕೆ ಬಗ್ಗೆ ಅವರಿಗೂ ಪತ್ರ ಬರೆದು ಪರಿಶೀಲನೆ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.
ಈಗಾಗಲೇ ಧಾರವಾಡ ಜಿಲ್ಲೆ ವಿವಿಧ ತಾಲೂಕು ಸೇರಿದಂತೆ ಕುಂದಗೋಳ ತಾಲೂಕಿನ ಎರಡೆರಡು ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಪೂರೈಕೆ ಮಾಡಲಾಗಿದ್ದು, ಇದು ಕಲುಷಿತ ಬೀಜ ಪೂರೈಕೆಯಾದ ಬಗ್ಗೆ ರೈತರ ಮೊದಲು ದೂರು ಎಂದರು.
Kshetra Samachara
15/06/2022 04:58 pm