ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
ಕುಂದಗೋಳ : ಪಟ್ಟಣದ ಬಸ್ ನಿಲ್ದಾಣದದಿಂದ ತಹಶೀಲ್ದಾರ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಒಳಗಿನ ಸಿಹಿ ನೀರಿನ ಪೈಪ್ ಒಡೆದ ಪರಿಣಾಮ ಜೀವಜಲ ವಿನಾಕಾರಣ ಹರಿದು ಚರಂಡಿ ಪಾಲಾಗುವ ಬಗ್ಗೆ ನಿನ್ನೆ "ಪೈಪ್ ಲೈನ್ ಮಾಡಿಲ್ಲ ದುರಸ್ತಿ ಜೀವ ಜಲ ಗಟಾರಿಗೆ ಹೋಗತೈತಿ" ಎಂಬ ಶಿರ್ಷಿಕೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನಿಸವಂತೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು.
ನಮ್ಮ ವರದಿ ಪ್ರಸಾರದ ಬಳಿಕ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಯನ್ನ ಗಮನಕ್ಕೆ ತೆಗೆದುಕೊಂಡು ಒಡೆದು ಹೋದ ಪೈಪ್ ಲೈನ್ ಕಾಮಗಾರಿ ದುರಸ್ತಿ ಕಾರ್ಯ ಕೈಗೊಂಡಿದ್ದು ಸಿಹಿ ನೀರು ಪೋಲಾಗುವುದನ್ನು ತಪ್ಪಿಸಿ ಸದ್ಬಳಕೆಗೆ ಮಾಡಿಕೊಳ್ಳಲು ಕ್ರಮ ವಹಿಸಿದ್ದಾರೆ. ತಕ್ಷಣ ಕಾಮಗಾರಿ ದುರಸ್ತಿ ಮಾಡಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕಾರ್ಯಕ್ಕೆ ಜನರು ಬೇಷ್ ಎಂದಿದ್ದಾರೆ.
Kshetra Samachara
29/09/2020 12:33 pm