ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಗುಡುಗು ಸಹಿತ ಮಳೆಯಿಂದಾಗಿ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಹೌದು….ಈ ಅಕಾಲಿಕ ಮಳೆಯಿಂದಾಗಿ ನಗರದ ಅನೇಕ ಪ್ರದೇಶಗಳಲ್ಲಿ ಮನೆ ಗೋಡೆ ಕುಸಿದು ಬಿದ್ದಿವೆ. ಅದೇರೀತಿ ನಗರದ ಪಿ.ಬಿ ರಸ್ತೆಗೆ ಹೊಂದಿಕೊಂಡಿರುವ ಹು- ಧಾ ಮಹಾನಗರ ಪಾಲಿಕೆ ವಾರ್ಡ್ ನಂಬರ್ 42 ರಲ್ಲಿ ಬರುವ ಕವಲು ಪೇಟೆಯಲ್ಲಿ, ಇಂದೋಬಾಯಿ ಶಂಕರ ಸಾ ಎಂಬುವರ ಮನೆ ಮೇಲ್ಛಾವಣಿ ಕುಸಿದು ಬಿದ್ದಿದೆ. 11 ಜನ ವಾಸವಿರುವ ಮನೆ ಕುಸಿದು ಬಿದ್ದಿದ್ದ ಪರಿಣಾಮ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇದ್ದ ಮನೆಯನ್ನೇ ಕಳೆದುಕೊಂಡು ಈ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಪರಿಹಾರದ ಕುರಿತು ವಾರ್ಡ್ ನ ಕಾರ್ಪೊರೇಟರ್ ಆದ ವೆಂಕಟೇಶ ಮೇಸ್ತ್ರಿ ಅವರನ್ನ ಭೇಟಿ ಆಗಿದ್ದಾರೆ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವುದಾಗಿ ಸಾಂತ್ವನ ಹೇಳಿದ್ದಾರೆ. ಈ ಕುಟುಂಬ ನೆಲೆಗಾಗಿ ಅಧಿಕಾರಿಗಳಿಗೆ ಕೈಚಾಚಿ ಕೇಳುತ್ತಿದೆ.
ಒಟ್ಟಿನಲ್ಲಿ ಈ ಅಕಾಲಿಕ ಮಳೆಯಿಂದ ವಾಣಿಜ್ಯ ನಗರಿಯ ಜನ ಕಂಗಾಲಾಗಿದ್ದು, ಸಂತ್ರಸ್ತರಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ ಪರಿಹಾರ ಒದಗಿಸಬೇಕಿದೆ.
Kshetra Samachara
12/10/2022 03:51 pm