ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ- ಕೊರೊನಾ ಹಾವಳಿಯಿಂದ ಸ್ಥಗಿತ ಗೊಂಡಿದ್ದ ಶಾಲೆಗಳು, ಮತ್ತೆ ಆರಂಭಕ್ಕೆ ಸರಕಾರ ಚಿಂತನೆ ನಡೆಸಿದೆ. ಇದರ ನಡುವೆ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಶಾಲೆಗಳಲ್ಲಿ, ಮಕ್ಕಳಿಗೆ ಪಠ್ಯದ ಜೊತೆಗೆ ಆರೋಗ್ಯ ವೃದ್ಧಿಗೂ ಒತ್ತು ನೀಡವ ನಿಟ್ಟಿನಲ್ಲಿ, ಶಾಲೆಗಳ ಆವರಣದಲ್ಲಿ ಓಪನ್ ಜಿಮ್ ಉಪಕರಣಗಳನ್ನು ಅಳವಡಿಸಲಾಗುತ್ತಿದೆ..
ನಗರದ ರಾಜನಗರದ ಕೇಂದ್ರೀಯ ವಿದ್ಯಾಲಯ ನಂ 1, ಸೇರಿದಂತೆ ರಾಜ್ಯದದಲ್ಲಿ ಪ್ರಾದೇಶಿಕ ವಿಭಾಗದ 15 ಶಾಲೆಗಳಲ್ಲಿ ಒಪನ್ ಜಿಮ್ ಉಪಕರಣಗಳನ್ನು ಅಳವಡಿಸಲಾಗಿದೆ. ಕೇಂದ್ರ ಸರಕಾರ ದೇಶದ್ಯಾದಂತ 310 ಕೇಂದ್ರೀಯ ವಿದ್ಯಾಲಯಗಳಲ್ಲಿ ಓಪನ್ ಜಿಮ್ ಅಳವಡಿಸಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಆರೋಗ್ಯದತ್ತ ಗಮನ ಹರಿಸಲು ಸಿದ್ಧತೆ ನಡೆಸುತ್ತಿರುವುದು ಪಾಲಕರ ಮುಖದಲ್ಲಿ ಸಂತಸ ಮೂಡಿಸಿದೆ ..
ಕೇಂದ್ರಿಯ ವಿದ್ಯಾಲಯ ಸಂಘಟನೆ, ತಮ್ಮ ಅಡಿಯಲ್ಲಿ ಬರುವ ಹುಬ್ಬಳ್ಳಿ ಧಾರವಾಡ ಸೇರಿದಂತೆ, ಒಟ್ಟು ಮೂರು ಕೇಂದ್ರಿಯ ವಿದ್ಯಾಲಯದಲ್ಲಿ ಜಿಮ್ ವ್ಯವಸ್ಥೆ ಮಾಡಲಾಗಿದ್ದು , ಶಾಲೆಯ ಗಾರ್ಡನ್ ಜಾಗದಲ್ಲಿ ಜಿಮ್ ಉಪಕರಣಗಳನ್ನು ಅಳವಡಿಸಿವೆ , ಮಕ್ಕಳಿಗಾಗಿ ವಿಶೇಷವಾಗಿ ಕ್ರಾಸ್ ಟ್ರೈನರ್ , ಸಿಟ್ ಅಪ್ ಬೊರ್ಡ್ ಡಬಲ್ , ಚೆಸ್ ಕಮ್ ಪುಲ್ಲರ್ , ರೋವರ್ , ಲೆಗ್ ಪ್ರೇಸ್ , ಹಾಗೂ ಇನ್ನಿತರ ಉಪಕರಣಗಳನ್ನು ಅಳವಡಿಸುವ ಮೂಲಕ ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಬರುವ ಮಕ್ಕಳಿಗೆ ಸಮಯದ ಅನುಸಾರವಾಗಿ ಜಿಮ್ ಮಾಡಲು ತಿಳಿಸಲಾಗುತ್ತದೆ ... !
ಒಟ್ಟಿನಲ್ಲಿ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಆರೋಗ್ಯ ಕಾಳಜಿ ಒತ್ತು ಕೇಂದ್ರೀಯ ವಿದ್ಯಾಲಯದ ಹಾಗೆ ಎಲ್ಲಾ ಶಾಲೆಗಳಲ್ಲಿ ಓಪನ್ ಜಿಮ್ ಆರಂಬಿಸಲಿ ಎನ್ನುವುದೇ ಎಲ್ಲರ ಆಶಯ.......!
Kshetra Samachara
24/11/2020 02:53 pm