ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ವರುಣನ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅನ್ನದಾತ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದ್ದು, ದಿಕ್ಕು ತೋಚದಂತ ಸ್ಥಿತಿಗೆ ಬಂದು ನಿಂತಿದ್ದಾನೆ. ಬೆಳೆಯ ಭರವಸೆಯಲ್ಲಿದ್ದ ರೈತ ಸಮುದಾಯಕ್ಕೆ ಬರ ಸಿಡಿಲು ಹೊಡೆದಂತಾಗಿದೆ.
ಹೌದು. ಕಳೆದೆರಡೂ ಎರಡೂ ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಶೇಂಗಾ ಬೆಳೆದ ರೈತ ಕಂಗಾಲಾಗಿದ್ದಾನೆ. ಶೇಂಗಾ ಕಿತ್ತು ರಾಶಿ ಮಾಡಬೇಕೆನ್ನುವ ಸಮಯದಲ್ಲಿಯೇ ರೈತನಿಗೆ ಬರಸಿಡಿಲು ಬಡೆದಂತಾಗಿದೆ.
ಇನ್ನೂ ನೀರಲ್ಲಿ ನಿಂತು ಕೊಳೆಯುತ್ತಿರುವ ಶೇಂಗಾ ಬೆಳೆ ಒಂದು ಕಡೆಯಾದರೇ ಮತ್ತೊಂದು ಕಡೆಯಲ್ಲಿ ಸಾಲದ ಭಯ ರೈತ ಸಮುದಾಯಕ್ಕೆ ಎದುರಾಗಿದೆ. ಬಡವರ ಬಾದಾಮಿ ನೀರಲ್ಲಿ ಕೊಚ್ಚಿ ಹೋಗಿದ್ದು, ಅತಿ ಹೆಚ್ಚು ಶೇಂಗಾ ಬೆಳೆದ ಹುಬ್ಬಳ್ಳಿ, ಕುಂದಗೋಳ ತಾಲೂಕಿನ ರೈತರು ರಕ್ಕಸ ಮಳೆಗೆ ನಲಗಿದ್ದಾರೆ.
Kshetra Samachara
12/10/2022 02:22 pm