ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ತಂದೆ ತಾಯಿ ನಿರ್ಧಾರ; ನಾಲ್ವರ ಬಾಳಿಗೆ ಬೆಳಕು

ಹುಬ್ಬಳ್ಳಿ: ಆತ ಬಾಳಿ ಬದುಕಬೇಕಿದ್ದ ಯುವಕ.. ಆತನಿಗಿನ್ನು ಕೇವಲ 31 ವರ್ಷ. ಆದ್ರೆ ವಿಧಿ‌ ಆತನನ್ನ ತನ್ನ‌ ಬಳಿಗೆ ಈ ವಯಸ್ಸಿಗೇ ಕರೆದುಕೊಂಡು ಬಿಡ್ತು. ಕಣ್ಣೆದುರೇ ಬೆಳೆದಿದ್ದ ಮಗನ ಸಾವಿನಲ್ಲೂ ಅವರ ಪೋಷಕರ ಮಗನ ದೇಹದ ಅಂಗಾಗಗಳನ್ನು ದಾನ ಮಾಡಲು ಕೈಗೊಂಡ ನಿರ್ಧಾರ ಇದೀಗ ನಾಲ್ವರ ಬಾಳಿಗೆ ಬೆಳಕನ್ನು ತಂದಿದೆ.

ಹೌದು ಹೊಸಪೇಟೆಯಲ್ಲಿ ಸೆಪ್ಟೆಂಬರ್ 25 ರಂದು ಯಲ್ಲಪ್ಪ ಎನ್ನುವ 31 ವರ್ಷದ ಯುವಕ ಕೆಲಸ ಮುಗಿಸಿ ಮರಳಿ ಮನೆಗೆ ಬರುತ್ತಿದ್ದ ವೇಳೆಯಲ್ಲಿ ಬೈಕ್‌ಗೆ ಆಡು ಅಡ್ಡಿಬಂದು ಅಪಘಾತವಾದ ಹಿನ್ನೆಲೆ ಗಂಭೀರ ಗಾಯಗೊಂಡಿದ್ದ. ಆತನನ್ನು‌ ಪೋಷಕರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ರು. ಆದ್ರೆ ಆತ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಕೋಮಾಗೆ ತಲುಪಿದ್ದ. ಎಷ್ಟೇ ಚಿಕಿತ್ಸೆ ನೀಡಿದ್ರೂ ಆತ ಚೇತರಿಸಿಕೊಳ್ಳಲಿಲ್ಲ. ಅಲ್ಲದೆ ಆತನ ಮಿದುಳು ಕೂಡ ನಿಷ್ಕ್ರಿಯಗೊಂಡಿತ್ತು. ಈ ವೇಳೆ ಯುವಕನ ಪೋಷಕರು ಈ ವಿಷಯ ತಿಳಿದು ಮಗ ಜೀವಂತವಾಗಿ ಉಳಿಯೋದಿಲ್ಲ ಎಂದು ಮನಗಂಡು ತಮ್ಮ ಮಗನ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ರು.

ಈ ಮೂಲಕ ಸಾವಿನ‌ ಅಂಚಿನಲ್ಲಿದ್ದ ನಾಲ್ವರ ಜೀವಕ್ಕೆ ಬೆಳಕು‌ ನೀಡುವ ಮೂಲಕ, ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದರು. ಇನ್ನು ಮೃತ ಯಲ್ಲಪ್ಪನ ಪೋಷಕರು‌ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುತ್ತಿದ್ದಂತೆಯೇ ಆಸ್ಪತ್ರೆಯ ವೈದ್ಯರು ಮೃತ ಯಲ್ಲಪ್ಪನ ದೇಹದಿಂದ, 2 ಕಿಡ್ನಿ, ಹೃದಯ ಕವಾಟಗಳನ್ನು ಶಸ್ತ್ರಚಿಕಿತ್ಸೆ ನಡೆಸಿ ಪಡೆದುಕೊಂಡ್ರು.

ಬಳಿಕ ತಮ್ಮ ಆಸ್ಪತ್ರೆಯಲ್ಲಿದ್ದ ಓರ್ವರಿಗೆ ಕಿಡ್ನಿ ಹಾಗೂ SDM ಆಸ್ಪತ್ರೆಯ ಓರ್ವರಿಗೆ ಮತ್ತೊಂದು ಕಿಡ್ನಿ ನೀಡಿ ಜೀವ ದಾನ ನೀಡಿದರು. ಇನ್ನು ಲಿವರ್ ಮತ್ತು ಹೃದಯದ ಕವಾಟಗಳನ್ನು ಬೆಂಗಳೂರಿನ‌ ಆಸ್ಪತ್ರೆಯ ರೋಗಿಗಳ ಜೀವದಾನಕ್ಕಾಗಿ ಹುಬ್ಬಳ್ಳಿಯಿಂದ ಏರ್ ಲಿಪ್ಟ್ ಮಾಡಿದರು. ಈ ಮೂಲಕ ಮೃತ ಯಲ್ಲಪ್ಪ ಸಾವಿನಲ್ಲೂ ನಾಲ್ವರ ಪಾಲಿಗೆ ಬೆಳಕು ನೀಡಿ ಹೋಗಿದ್ದ.

ಇನ್ನು ಯಲ್ಲಪ್ಪನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುವ ವೇಳೆ ಆಸ್ಪತ್ರೆಯ ಸಿಬ್ಬಂದಿ ಸೇರಿ ವೈದ್ಯರು ಸೆಲ್ಯೂಟ್ ನೀಡಿ ಗೌರವದೊಂದಿಗೆ ಕಳಿಸಿ ಕೊಟ್ಟರು. ಪೋಷಕರಲ್ಲಿ ಮಗನ ಸಾವು ನೋವಿನ ಕಣ್ಣೀರಿನಲ್ಲೂ ಕೂಡ ಸಾರ್ಥಕತೆ ಎದ್ದು ಕಾಣುತ್ತಿತ್ತು. ಒಟ್ಟಾರೆ ಹೊಸಪೇಟೆಯ ಈ ಯುವಕ ತನ್ನ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರೂ ಕೂಡ ಈ ಯುವಕನ ಪೋಷಕರು ಮಗನ ಸಾವಿನ ನೋವಿನಲ್ಲೂ ಕೈಗೊಂಡ ಮಗನ ಅಂಗಾಂಗ ದಾನದ ನಿರ್ಧಾರ, ನಾಲ್ವರ ಬಾಳಿಗೆ ಬೆಳಕು ನೀಡಿದ್ದು ನಿಜಕ್ಕೂ ಶ್ಲಾಘನೀಯ .

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/09/2022 06:26 pm

Cinque Terre

94.49 K

Cinque Terre

1

ಸಂಬಂಧಿತ ಸುದ್ದಿ