ಕುಂದಗೋಳ : ಯಾವುದೇ ಕಾಮಗಾರಿಯಾಗಲಿ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಆರಂಭದಲ್ಲಿ ಇರುವ ಉತ್ಸಾಹ ಆ ಕಾಮಗಾರಿ ಮುಗಿದ ಮೇಲೆ ಇರುವುದಿಲ್ಲ ಎಂಬುದಕ್ಕೆ ತಾಜಾ ಉದಾಹರಣೆ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ನಿರ್ಮಿಸಲಾಗಿರುವ ನೂತನ ಪಶು ಆಸ್ಪತ್ರೆ ಕಟ್ಟಡ.
ಯರಗುಪ್ಪಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಇದರಿಂದ ಶಿಥಿಲಗೊಂಡಿರುವ ಬಾಡಿಗೆ ಮನೆಯಲ್ಲಿ ಆಸ್ಪತ್ರೆ ನಡೆಸುವಂತ ಪರಿಸ್ಥಿತಿ ಎದುರಾಗಿದೆ.
ಮುಖ್ಯವಾಗಿ ಯರಗುಪ್ಪಿ ಸ್ಥಳೀಯ ಶಾಸಕರ ಗ್ರಾಮ ಇಲ್ಲಿ ಹೆಚ್ಚಾಗಿ ರೈತಾಪಿ ವರ್ಗದ ಜನರೇ ಇದ್ದು, ಜಾನುವಾರುಗಳ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆ ಜಾನುವಾರುಗಳಿಗೆ ಅನಾರೋಗ್ಯ ಉಂಟಾದಾಗ ಸೂಕ್ತ ಚಿಕಿತ್ಸೆ ನೀಡಬೇಕಾದ ಪಶು ಆಸ್ಪತ್ರೆಯ ತಯಾರಿದ್ದರೂ ಉದ್ಘಾಟನೆ ಕಾಣದೆ ಉಪಯೋಗದಿಂದ ದೂರ ಇರುವುದು ವಿಪರ್ಯಾಸವಾಗಿದೆ.
ಸದ್ಯ ಉದ್ಘಾಟನೆ ಕಾಣದ ಪಶು ಆಸ್ಪತ್ರೆಯನ್ನು ನಿರ್ಮಿತಿ ಕೇಂದ್ರವು ಜಿಲ್ಲಾ ಪಂಚಾಯತ 2018-19 ನೇ ಸಾಲಿನ ಆರ್.ಐ.ಡಿ.ಎಫ್ 23 ರ ಯೋಜನೆಯಡಿ ನಿರ್ಮಿಸಿದ್ದರೂ ಅದರ ಪ್ರಯೋಜನ ಜಾನುವಾರುಗಳಿಗಿಲ್ಲ. ಸೋರುವ ಬಾಡಿಗೆ ಆಧಾರಿತ ಪಶು ಆಸ್ಪತ್ರೆ ಕಟ್ಟಡದ ಅವ್ಯವಸ್ಥೆ ಮನಗಂಡು ಸಿಬ್ಬಂದಿಗಳು ಔಷಧಿ ಹಾಗೂ ಇತರೆ ವೈದ್ಯಕೀಯ ಸಾಮಗ್ರಿಗಳ ರಕ್ಷಣೆಗಾಗಿ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಿರುವುದು ನಿಜಕ್ಕೂ ಖೇದಕರ.
ವರದಿ: ಶ್ರೀಧರ ಪೂಜಾರ
Kshetra Samachara
03/08/2022 06:35 pm