ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ 38 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆ ನೀಡಿದ ದೇಶಪಾಂಡೆ ಫೌಂಡೇಶನ್

ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್ ಹಾಗೂ ಎ.ಎಮ್.ಡಿ ಕಂಪನಿ ಸಹಯೋಗದಲ್ಲಿ ನಗರದ ಕಿಮ್ಸ್ ಆಸ್ಪತ್ರೆಗೆ 38 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಇಂದು ಹಸ್ತಾಂತರ ಮಾಡಲಾಯಿತು.

ನಗರದ ಕಿಮ್ಸ್ ಆವರಣದ ಆಡಳಿತ ಮಂಡಳಿಯ ಸಭಾಭವನದಲ್ಲಿ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಬಿ.ಗೋಲಕಕೃಷ್ಣ ಮಾತನಾಡಿ, ದೇಶಪಾಂಡೆ ಫೌಂಡೇಶನ್ ಮತ್ತು ಎ.ಡಿ.ಎಮ್ ಕಂಪನಿ ಸಾರ್ವಜನಿಕ ಸೇವೆಯಲ್ಲಿ ಸದಾಕಾಲ ಮುಂದಿದ್ದು, ಕೋವಿಡ್ ಸೋಂಕಿನ ಎರಡೂ ಅಲೆಗಳಲ್ಲಿ ಕಿಮ್ಸ್ ಆಸ್ಪತ್ರೆಗೆ ಹಲವಾರು ವೈದ್ಯಕೀಯ ಸಲಕರಣೆಗಳನ್ನು ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಅದರಂತೆ ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ ಕೋವಿಡ್ ರೋಗಿಗಳ ಸಹಾಯಕ್ಕೆ ಅರವಳಿಕೆ ಯಂತ್ರ, ನಿಯೋ ನಥಲ್ ವಾರಮರ್ಸ್ ಯಂತ್ರ ಹಾಗೂ ಬ್ರೋಬ್ಸ್ ಯಂತ್ರಗಳನ್ನು ನೀಡುವ ಮೂಲಕ ಗರ್ಭಿನಿಗಳು ಮತ್ತು ನವಜಾತ ಶಿಶುಗಳಿಗೆ ಉತ್ತಮ ಚಿಕಿತ್ಸೆಗೆ ಉಪಯುಕ್ತವಾಗಿದೆ ಎಂದರು.

ವೈದ್ಯಕೀಯ ಅಧಿಕ್ಷಕ ಮಾತನಾಡಿ, ದೇಶಪಾಂಡೆ ಫೌಂಡೇಶನ, ಎ.ಡಿ.ಎಮ್ ಕಂಪನಿ ಕಿಮ್ಸ್ ಆಸ್ಪತ್ರೆಗೆ ಆಧುನಿಕ ತಂತ್ರಜ್ಞಾನ ಸಲಕರಣೆಗಳನ್ನು ನೀಡಿದ್ದು, ಅವುಗಳು ಕೋವಿಡ್ ಸೋಂಕಿತರು ಹಾಗೂ ನವಜಾತ ಶಿಶುಗಳಿಗೆ ಅನುಕೂಲವಾಗಲಿದೆ. ಈ ಮೂಲಕ ಉತ್ತರ ಕರ್ನಾಟಕ ಸಂಜೀವಿನಿ ಎನಿಸಿಕೊಂಡಿರುವ ಕಿಮ್ಸ್‌ಗೆ ಎನ್.ಜಿ.ಓ ಗಳು ಸಹಾಯ ಮಾಡುತ್ತಿದ್ದು ರೋಗಿಗಳಿಗೆ ಮತ್ತಷ್ಟು ಸೇವೆ ನೀಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎ.ಡಿ.ಎಮ್ ಕಂಪನಿಯ ಹೆಮಂತ್‌ಕುಮಾರ ಸರಸ್ವತ, ಶಶಾಂಕ ರೆಡ್ಡಿ, ಅನಿಲಕುಮಾರ ತೆರದಾಳ, ಕಿಮ್ಸ್ ಪ್ರೊ.ನಾರಾಯಣ ಹೆಬಸೂರ, ಮಲ್ಕಿ ಪಾಟೀಲ, ದೇಶಪಾಂಡೆ ಫೌಂಡೇಶನ್ ಸಿ.ಇ.ಓ ವಿವೇಕ ಪವಾರ್, ಸಿ.ಓ.ಓ ಸುನಿಲ ಕೇಸಿ, ನಿರ್ದೇಶಕ ವಿಜಯ ಪುರೋಹಿತ ಇದ್ದರು.

Edited By : Nagaraj Tulugeri
Kshetra Samachara

Kshetra Samachara

21/01/2022 03:27 pm

Cinque Terre

33.42 K

Cinque Terre

6

ಸಂಬಂಧಿತ ಸುದ್ದಿ