ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ‌ವಿಕಾಸನಗರ, ಸಿದ್ಧಲಿಂಗೇಶ್ವರ ನಗರ, ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಭೂಮಿ ಪೂಜೆ

ಹುಬ್ಬಳ್ಳಿ: ‌ವಿಕಾಸನಗರ, ಸಿದ್ಧಲಿಂಗೇಶ್ವರ ನಗರ, ರಾಜಧಾನಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ಜಗದೀಶ್ ಶೆಟ್ಟರ್ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ನಾಲಾಗೆ ಗೇಬಿಯನ್ ವಾಲ್ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆಯಾದ ಬಳಿಕ ನಾಲಾ ತಡೆಗೋಡೆ ಕಾಮಗಾರಿಯು ಬಿಡನಾಳದವರೆಗೂ ನಡೆಯಲಿದೆ.

ಈ ಸೇತುವೆಯಿಂದ ಸಿದ್ಧಲಿಂಗೇಶ್ವರ ನಗರ, ರಾಜಧಾನಿ ಕಾಲೋನಿ ಮತ್ತು ವಿಕಾಸನಗರದ ಜನರಿಗೆ ಅನುಕೂಲವಾಗಲಿದೆ. ಸೇತುವೆ ಕಾಮಗಾರಿ ನಡೆಯುವಾಗ ಜನರ ಸಹಕಾರ ಬಹಳ ಮುಖ್ಯ. ಶೀಘ್ರವಾಗಿ ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು‌.

ಮೊದಲ ಹಂತದ ಹಸಿರು ಸಂಚಾರಿ ಪಥ (ಗ್ರೀನ್‌ ಮೊಬಿಲಿಟಿ ಕಾರಿಡಾರ್ ) ಉಣಕಲ್ ನಲ್ಲಿ ಪೂರ್ಣಗೊಂಡಿರುತ್ತದೆ‌.‌ನಾಲಾ ಪಕ್ಕದಲ್ಲೇ ವಾಕಿಂಗ್ ಪಾಥ್, ಸೈಕಲ್ ಪಾಥ್ ನಿರ್ಮಿಸಲಾಗಿದೆ. ಜನರು ವ್ಯಾಯಾಮ ಮಾಡಲು ಉದ್ಯಾನವಿದೆ.‌ ಇಲ್ಲಿಯೂ ಕೂಡ ತಡೆಗೋಡೆ, ವಾಕಿಂಗ್ ಮತ್ತು ಸೈಕಲ್ ಪಾಥ್ ನಿರ್ಮಿಸಲಾಗುವುದು ಎಂದು ತಿಳಿಸಿದರು.

Edited By : Abhishek Kamoji
Kshetra Samachara

Kshetra Samachara

13/10/2022 06:04 pm

Cinque Terre

14.32 K

Cinque Terre

0

ಸಂಬಂಧಿತ ಸುದ್ದಿ