ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಈ ಪಾಲಿಕೆಯ ಕಮೀಷನ್ ದಂಧೆಯ ಕರಾಳ ಮುಖವನ್ನು ಬಯಲು ಮಾಡಿದ್ದ ನಿಮ್ಮ ಪಬ್ಲಿಕ್ ನೆಕ್ಸ್ಟ್ ಈಗ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು ಮಾಡುತ್ತಿದೆ. ಅಷ್ಟಕ್ಕೂ ಏನಿದು ಬ್ರಹ್ಮಾಂಡ ಭ್ರಷ್ಟಾಚಾರ ಅಂತೀರಾ ಈ ಸ್ಟೋರಿ ನೋಡಿ...
ಹೀಗೆ ಶಾಸಕರ ಮುಂದೆ ಕಣ್ಣೀರು ಹಾಕುತ್ತಿರುವ ಚಾಲಕರು. ವೇತನಕ್ಕಾಗಿಯೇ ಜಾತಕ ಪಕ್ಷಿಯಂತೆ ಕಾಯುತ್ತಿರುವ ಕಾರ್ಮಿಕರು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿ. ಹೌದು.. ಹುಬ್ಬಳ್ಳಿ- ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ ಟಿಪ್ಪರ್ ಚಾಲಕರಿಗೆ ವೇತನ ವಿಳಂಬ ಆರೋಪ ಕೇಳಿ ಬರುತ್ತಿದೆ. ಪರ್ಯಾಯ ಚಾಲಕರ ಹೆಸರಲ್ಲಿ ಪ್ರತಿ ತಿಂಗಳು 3.84 ಲಕ್ಷ ರೂಪಾಯಿ ವಂಚನೆ ನಡೆಯುತ್ತಿದೆ ಎಂದು ಹುಬ್ಬಳ್ಳಿ ಧಾರವಾಡ ಪೂರ್ವ ಶಾಸಕ ಪ್ರಸಾದ್ ಅಬ್ಬಯ್ಯ ಅವರೇ ಗಂಭೀರ ಆರೋಪ ಮಾಡಿದ್ದು, ಹುಬ್ಬಳ್ಳಿ- ಧಾರವಾಡದ ವ್ಯಾಪ್ತಿಯಲ್ಲಿ 193 ಟಿಪ್ಪರ್ ಚಾಲಕರ ಹೆಸರಲ್ಲಿ ಗುತ್ತಿಗೆದಾರರು ದೊಡ್ಡ ಗೋಲಮಾಲ್ ನಡೆಸಿದ್ದಾರೆ ಅಂತ ಶಾಸಕರೇ ಕಿಡಿ ಕಾರಿದ್ದಾರೆ.
ಇನ್ನೂ ಕಳೆದ ಎರಡು ತಿಂಗಳಿನಿಂದಲೂ ವೇತನವಿಲ್ಲ.
ರಜೆ ತಗೋಬೇಕಂದ್ರೆ ಪರ್ಯಾಯ ಚಾಲಕರ ವ್ಯವಸ್ಥೆ ಮಾಡಬೇಕು. ಆದರೇ ಅದಕ್ಕೂ ಟಿಪ್ಪರ್ ಚಾಲಕರೇ ಹಣ ನೀಡಬೇಕು. ಆದರೆ ಪಾಲಿಕೆಯಿಂದ 30 ಸ್ಪೇರ್ ಚಾಲಕರ ಹೆಸರಲ್ಲಿ ಹಣ ನೀಡ್ತಿದೆ. ಪಾಲಿಕೆ ನೀಡುತ್ತಿರುವ 3.84 ಲಕ್ಷ ರೂಪಾಯಿ ಗುಳುಂ ಆಗಿದ್ದು, ಈ ಕುರಿತು ಪಾಲಿಕೆಗೆ ದೂರು ನೀಡಿದ್ದರೂ ಯಾವುದೇ ಕ್ರಮವಿಲ್ಲ ಎಂದು ಕಿಡಿ ಕಾರಿದ್ದಾರೆ. ಐದು ದಿನದೊಳಗಾಗಿ ವೇತನ ಪಾವತಿಸಬೇಕು. ಸ್ಪೇರ್ ಚಾಲಕರ ಹೆಸರಲ್ಲಿ ನಡೀತಿರೋ ದುರ್ಬಳಕೆ ನಿಲ್ಲಬೇಕು.ಇಲ್ಲದಿದ್ದಲ್ಲಿ ಪಾಲಿಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಆಟೋ ಟಿಪ್ಪರ್ ಚಾಲಕರು ಕೂಡ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಎಷ್ಟೇ ಹೇಳಿದರೂ ಅಷ್ಟೇ ಪಾಲಿಕೆಯಲ್ಲಿ ನಡೆಯುತ್ತಿರುವ ಕಮೀಷನ್ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ಸಿಎಂ ತವರೂ ಜಿಲ್ಲೆಯಲ್ಲಿಯೇ ಹೀಗಾದರೇ ಹೇಗೆ ಎಂಬುವುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ. ಕೂಡಲೇ ಅವ್ಯವಸ್ಥೆಗೆ ಬ್ರೇಕ್ ಹಾಕುವ ಕಾರ್ಯ ಮಾಡಬೇಕಿದೆ.
Kshetra Samachara
04/10/2022 01:29 pm