ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವೈಜ್ಞಾನಿಕ ಕಾಮಗಾರಿಗೆ ನಡೆಯುತ್ತಿದೆಯಾ ಪ್ಯಾಚ್ ವರ್ಕ್? ಚಿಗುರುವ ಚಿಗರಿಗೆ ನೂರೊಂದು ಕಂಟಕ

ಹುಬ್ಬಳ್ಳಿ: ಅದು ಹುಬ್ಬಳ್ಳಿ ಧಾರವಾಡ ಅವಳಿನಗರದ ಮಹತ್ವಪೂರ್ಣ ಯೋಜನೆ. ಆ ಯೋಜನೆಯ ಕಾಮಗಾರಿ ಆರಂಭಗೊಂಡು ಸುಮಾರು ವರ್ಷಗಳೇ ಆದ್ರೂ ಇದುವರೆಗೂ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಆಮೆ ವೇಗದ ಕಾಮಗಾರಿಯಿಂದ ದಶಕಗಳೇ ಉರುಳಿದರೂ ಅವೈಜ್ಞಾನಿಕ ಕಾಮಗಾರಿಯೇ ಮುನ್ನಡೆಯುತ್ತಿದೆ ವಿನಃ ವೈಜ್ಞಾನಿಕ ಲಕ್ಷಣಗಳೇ ಕಾಣುತ್ತಿಲ್ಲ. ಅಷ್ಟಕ್ಕೂ ಯಾವುದು ಈ ಯೋಜನೆ ಅಂತೀರಾ ಈ ಸ್ಟೋರಿ ನೋಡಿ.

ಅವಳಿನಗರದಲ್ಲಿ ತ್ವರಿತ ಸಾರಿಗೆ ಸೇವೆ ಕಲ್ಪಿಸುವ ಸದುದ್ದೇಶದಿಂದ ನೂರಾರು ಕೋಟಿ ವೆಚ್ಚ ಮಾಡಿ ಬಿ.ಆರ್.ಟಿ.ಎಸ್ ಯೋಜನೆ ಜಾರಿಗೆ ತರಲಾಗಿದೆ. ಆದರೆ ಸುಮಾರು ಹದಿನಾಲ್ಕು ವರ್ಷವಾಗುತ್ತಾ ಬಂದರೂ ಹುಬ್ಬಳ್ಳಿ ಧಾರವಾಡ ನಡುವಿನ ನವಲೂರಿನ ಬಳಿಯ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಈಗಾಗಲೇ ಸಾರ್ವಜನಿಕ ವಿರೋಧದ ನಡುವೆ ಸ್ಥಗಿತಗೊಂಡ ಕಾಮಗಾರಿ ಈಗ ಸಾರ್ವಜನಿಕರ ಒಪ್ಪಿಗೆ ಪಡೆದು ಆರಂಭಗೊಂಡಿದೆ. ಆದರೆ ವಿಪರ್ಯಾಸಕರ ಸಂಗತಿ ಎಂದರೆ ಇರುವ ಅವೈಜ್ಞಾನಿಕ ಕಾಮಗಾರಿಗೆ ತೇಪೆ ಹಾಕುವ ಕಾರ್ಯವನ್ನು ಮಾಡಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿ ಕೈಬಿಟ್ಟು ವೈಜ್ಞಾನಿಕ ಮಾರ್ಗವನ್ನು ಅನುಸರಿಸದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಅಧಿಕಾರಿಗಳು ಮಾತ್ರ ಹೇಳುವುದು ಹೀಗೆ.

ಇನ್ನೂ ಬಿ.ಆರ್.ಟಿ.ಎಸ್ ಅವೈಜ್ಞಾನಿಕ ಕಾಮಗಾರಿ ಕುರಿತು ಶಾಸಕ ಅರವಿಂದ ಬೆಲ್ಲದ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಕೂಡ ಬಹುದಿನಗಳ ನಂತರ ಆರಂಭಗೊಂಡ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿರುವುದು ಒಂದು ಕಡೆಯಾದರೇ ಇರುವ ಅವೈಜ್ಞಾನಿಕ ಕಾಮಗಾರಿಗೆ ತೇಪೆ ಹಾಕಲು ಮುಂದಾಗಿದ್ದು, ಬೇಗನೆ ಕಾಮಗಾರಿ ಮುಗಿಸಿ ಕೈ ತೊಳೆದುಕೊಳ್ಳುವ ಪ್ರವೃತ್ತಿಗೆ ಮುಂದಾಗಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.

ಒಟ್ಟಿನಲ್ಲಿ ಅವಳಿನಗರದ ಬಹುದೊಡ್ಡ ಕನಸನ್ನು ಹೊತ್ತಿರುವ ಬಿ.ಆರ್.ಟಿ.ಎಸ್ ಯೋಜನೆಯ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಸೂಕ್ತ ಕ್ರಮಗಳನ್ನು ಜರುಗಿಸಿ ಅಧಿಕಾರಿಗಳ ಮುತುವರ್ಜಿಯಿಂದ ಅವೈಜ್ಞಾನಿಕ ಕಥೆಗೆ ಫುಲ್ ಸ್ಟಾಫ್ ಹಾಕುವ ಮೂಲಕ ವೈಜ್ಞಾನಿಕತೆಗೆ ಮುಂದಾಗಬೇಕಿದೆ.

Edited By : Manjunath H D
Kshetra Samachara

Kshetra Samachara

05/09/2022 06:01 pm

Cinque Terre

42.47 K

Cinque Terre

2

ಸಂಬಂಧಿತ ಸುದ್ದಿ