ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಸಿವು ನೀಗಿಸುವ ಕ್ಯಾಂಟಿನ್ ಗೆ ಕಂಟಕ : ಇಷ್ಟು ವರ್ಷಗಳಾದರೂ ಆರಂಭಕ್ಕಿಲ್ಲ ಗ್ರೀನ್ ಸಿಗ್ನಲ್

ಹುಬ್ಬಳ್ಳಿ: ಅದು ಮಾಜಿ ಸಿಎಂ ಸಿದ್ಧರಾಮಯ್ಯನವರ ಮಹತ್ವದ ಯೋಜನೆ. ಅದೆಷ್ಟೋ ಹಸಿದ ಹೊಟ್ಟೆಗಳಿಗೆ ಈ ಯೋಜನೆ ಆಧಾರವಾಗಿತ್ತು. ಆದರೆ ಅದೊಂದು ದಿವ್ಯ ನಿರ್ಲಕ್ಷ್ಯದಿಂದ ಈಗ ಮಹತ್ವದ ಯೋಜನೆ ಮೂಲೆಗುಂಪಾಗಿ ಹೋಗುತ್ತಿದೆ. ಅಷ್ಟಕ್ಕೂ ಏನಿದು ಯೋಜನೆ...? ಅಲ್ಲಿ ಆಗಿರುವ ನಿರ್ಲಕ್ಷ್ಯ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ..

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಬಡವರ ಹಸಿವು ನೀಗಿಸಲು ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಹನ್ನೆರಡು ಇಂದಿರಾ ಕ್ಯಾಂಟಿನ್ ಸ್ಥಾಪನೆ ಮಾಡಿತ್ತು. ಆದರೆ ಬಡವರ ಹಸಿವು ನೀಗಿಸುವ ಹನ್ನೆರಡು ಕ್ಯಾಂಟಿನ್ ನಲ್ಲಿ ಮೂರು ಇಂದಿರಾ ಕ್ಯಾಂಟೀನ್ ಗಳು ಆರಂಭವೇ ಆಗಿಲ್ಲ. ಹೌದು..ಅವಳಿನಗರಕ್ಕೆ 12 ಕ್ಯಾಂಟೀನ್ ಗಳು ಮಂಜೂರಾಗಿದ್ದು, 12ರ ಪೈಕಿ 9 ಕಾರ್ಯನಿರ್ವಹಣೆ ಮಾಡುತ್ತಿವೆ. ಬಡವರಿಗೆ ಮೂರು ಹೊತ್ತು ಕಡಿಮೆ ದರದಲ್ಲಿ ಊಟ ಮತ್ತು ಉಪಹಾರ ನೀಡುವ 12 ಇಂದಿರಾ ಕ್ಯಾಂಟೀನ್ಗಳು ಹುಬ್ಬಳ್ಳಿ-ಧಾರವಾಡಕ್ಕೆ ಮಂಜೂರಾಗಿದ್ದವು. ಆದರೆ, ಸೇವೆ ಒದಗಿಸುತ್ತಿರುವುದು ಒಂಬತ್ತು ಮಾತ್ರ. ಉಳಿದ ಮೂರು ಕ್ಯಾಂಟೀನ್ ಗಳನ್ನು ಐದು ವರ್ಷ ಕಳೆಯುತ್ತಾ ಬಂದರು ಆರಂಭವಾಗಿಲ್ಲ. ಕೂಲಿ ಕಾರ್ಮಿಕರು ಸೇರಿದಂತೆ ಬಡವರು ಉಪವಾಸದಿಂದ ಬಳಲುವುದನ್ನು ತಪ್ಪಿಸುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ಯಾಂಟೀನ್ ಗಳನ್ನು ಆರಂಭಿಸಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯದ ಪರಮಾವಧಿಯಿಂದ ಇಂದಿರಾ ಕ್ಯಾಂಟಿನ್ ಆರಂಭಗೊಂಡಿಲ್ಲ.

ಇನ್ನೂ ಐದು ವರ್ಷಗಳಾದರೂ ಅವಳಿ ನಗರದಲ್ಲಿ ಮೂರು ಇಂದಿರಾ ಕ್ಯಾಂಟೀನ್ಗಳನ್ನು ತೆರೆಯದಿರುವುದು ನಿರ್ಲಕ್ಷ್ಯದ ಪರಮಾವಧಿ. ಇದು ಬಡವರ ವಿರುದ್ಧದ ಧೋರಣೆಯ ಪ್ರತೀಕವಾಗಿದೆ. ಕರೋನಾದಿಂದಾಗಿ ಜನ ಇನ್ನೂ ಚೇತರಿಸಿಕೊಂಡಿಲ್ಲ, ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ.

ಸಂಕಷ್ಟದ ಸ್ಥಿತಿಯಲ್ಲಿ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡವರು ಬದುಕು ನಡೆಸುವುದೇ ಕಷ್ಟವಾಗಿದೆ.ಇಂತಹ ಸಂದರ್ಭದಲ್ಲಿ ಕಡಿಮೆ ದರದಲ್ಲಿ ತಿಂಡಿ, ಊಟ ಸಿಗುವ ಇಂದಿರಾ ಕ್ಯಾಂಟೀನ್ ಗಳು ಬಡವರಿಗೆ ಅಗತ್ಯ ಸೇವೆ ಒದಗಿಸಬೇಕಾಗಿದೆ. ಹೀಗಿದ್ದರೂ ಸರ್ಕಾರದ ಜನರ ಪರವಾಗಿದೆ ಎಂಬುವುದನ್ನು ಮರೆತು ರಾಜಕಾರಣ ಮಾಡುವ ಹಿನ್ನೆಲೆಯಲ್ಲಿ ಅನುದಾನದ ನೀಡದೇ ಇರುವುದರಿಂದ ಈಗ ಮೂರು ಇಂದಿರಾ ಕ್ಯಾಂಟಿನ್ ಆರಂಭಗೊಂಡಿಲ್ಲ.

ಒಟ್ಟಿನಲ್ಲಿ ಗಂಡ ಹೆಂಡತಿಯ ಜಗಳದಲಿ ಕೂಸು ಬಡವಾಯಿತು ಎಂಬ ಮಾತಿನಂತೆ ಕಾಂಗ್ರೆಸ್ ಬಿಜೆಪಿ ರಾಜಕೀಯ ಜಟಾಪಟಿಯಲ್ಲಿ ಹಸಿದವರ ಹಸಿವು ನೀಗಿಸುವ ಇಂದಿರಾ ಕ್ಯಾಂಟಿನ್ ರಾಜಕಾರಣದ ಬಿಸಿ ಬೇಗುದಿಯಲ್ಲಿ ಸಿಕ್ಕು ನಲಗುತ್ತಿರುವುದು ವಿಪರ್ಯಾಸಕರ ಸಂಗತಿಯಾಗಿದೆ. ರಾಜಕೀಯ ತಾರತಮ್ಯ ಏನೇ ಇದ್ದರೂ ಬಡವರ ಹಸಿವು ನೀಗಿಸುವ ಕಾರ್ಯವನ್ನು ಆಳುವ ಸರ್ಕಾರ ಮಾಡಬೇಕಿದೆ.

Edited By : Shivu K
Kshetra Samachara

Kshetra Samachara

04/09/2022 01:19 pm

Cinque Terre

71.78 K

Cinque Terre

6

ಸಂಬಂಧಿತ ಸುದ್ದಿ