ಕುಂದಗೋಳ: ಸಂಗೀತ ಕ್ಷೇತ್ರದಲ್ಲಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ ಸವಾಯಿ ಗಂಧರ್ವರ ಕುಂದಗೋಳದ ಸ್ಮಾರಕ ಭವನ ಅವ್ಯವಸ್ಥೆ ತಾಣವಾಗಿ ಹಾಳಾಗುತ್ತಿರುವ ಬಗ್ಗೆ ಇತ್ತೀಚೆಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು.
ಈ ಬಗ್ಗೆ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಮಾತನಾಡಿ ಸವಾಯಿ ಗಂಧರ್ವರ ಸ್ಮಾರಕ ಭವನ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಪಟ್ಟಣ ಪಂಚಾಯಿತಿಗೆ ತಿಳಿಸುವೆ. ಶೀಘ್ರವೇ ಅಭಿವೃದ್ಧಿಗೆ ಸೂಚಿಸುವೆ ಎಂದರು.
ಅದರಂತೆ ತಹಶೀಲ್ದಾರರ ವರ್ಗಾವಣೆಗೆ ಕೆಲ ಮುಖಂಡರು ಒತ್ತಾಯ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಆಡಳಿತ ವೈಖರಿ ಹಾಗೂ ಸರ್ಕಾರಿ ಕರ್ತವ್ಯದ ಬಗ್ಗೆ ಮೇಲಾಧಿಕಾರಿಗಳು ಗಮನಿಸಿ ಕೈಗೊಂಡ ಕ್ರಮಕ್ಕೆ ನಾನು ಬದ್ಧ ಎಂದರು. ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ವರ್ಗಾವಣೆಯ ಒತ್ತಾಯಕ್ಕೆ ಸರ್ಕಾರ ಅವಲೋಕಿಸಿ ಕ್ರಮ ಕೈಗೊಳ್ಳಲಿ ಎಂದರು.
Kshetra Samachara
06/08/2022 12:04 pm