ಹುಬ್ಬಳ್ಳಿ: ಹುಬ್ಬಳ್ಳಿ ಟ್ರಾಫಿಕ್ ಒಳಗೆ ಓವರ್ ಟೇಕ್ ಮಾಡಿಕೊಂಡ ಹೋಗುವುದು ಒಂದು ದೊಡ್ಡ ಸಾಹಸವೇ ಆಗಿದೆ. ನಾ ಮುಂದೆ ನೀ ಮುಂದೆ ಎಂದು ಬಸ್ ಚಾಲಕರು ಮಾರ್ಗ ಮಧ್ಯದಲ್ಲಿಯೇ ವಾಹನ ನಿಲ್ಲಿಸಿಕೊಂಡು ವಾಗ್ವಾದ ನಡೆಸಿದ ಘಟನೆ ಹುಬ್ಬಳ್ಳಿಯ ನೀಲಿಜನ ರಸ್ತೆಯಲ್ಲಿ ನಡೆದಿದೆ.
ಮೊನ್ನೆಯಷ್ಟೇ ಓವರ್ ಟೇಕ್ ಮಾಡಲು ಹೋಗಿ ಬಸ್ ಹಾಗೂ ಕ್ಯಾಂಟರ್ ನಡುವಿನ ಡಿಕ್ಕಿ ಹೊಡೆದ ಪ್ರಕರಣ ಮಾಸುವ ಮುನ್ನವೇ ಈಗ ಓವರ್ ಟೇಕ್ ವಿಷಯಕ್ಕೆ ಬಸ್ ಚಾಲಕರೇ ಕಿತ್ತಾಡಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಟ್ರಾಫಿಕ್ ಸಮಸ್ಯೆ ಅನುಭವಿಸುತ್ತಿರುವ ಬಸ್ ಚಾಲಕರು, ದ್ವಿಚಕ್ರ ಹಾಗೂ ಆಟೋ ಹಾವಳಿಯಿಂದ ಬೇಸತ್ತಿದ್ದು, ಯಾವಾಗ ಮುಕ್ತಿ ಸಿಗುತ್ತದೆಯೋ ಎಂದು ಎದುರು ನೋಡುತ್ತಿದ್ದಾರೆ.
Kshetra Samachara
05/08/2022 10:43 am