ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್; ಮಜ್ಜಿಗುಡ್ಡ ಗ್ರಾಮದಲ್ಲಿ ತೆರವಾದ ಕಸದತೊಟ್ಟಿ

ಅಣ್ಣಿಗೇರಿ: 'ಗಬ್ಬೆದ್ದು ನಾರುತ್ತಿದೆ ಮಜ್ಜಿಗುಡ್ಡ ಗ್ರಾಮದ ಅಂಬೇಡ್ಕರ್ ನಗರದ ಮುಖ್ಯರಸ್ತೆ' ಎಂಬ ಶೀರ್ಷಿಕೆಯಡಿ ನಿಮ್ಮ ಪಬ್ಲಿಕ್ ನೆಸ್ಟ್ ಕಳೆದ 9 ದಿನಗಳ ಹಿಂದೆ ಸುದ್ದಿಯೊಂದನ್ನು ಬಿತ್ತರಿಸಿತ್ತು. ಇದಕ್ಕೆ ಎಚ್ಚೆತ್ತ ಸಂಬಂಧಿಸಿದ ಅಧಿಕಾರಿಗಳು ನಿನ್ನೆ ಜೆಸಿಬಿ ಯಂತ್ರದಿಂದ ಕಸದ ರಾಶಿಯನ್ನು ಅಲ್ಲಿಂದ ತೆಗೆಸಿ ಜಾಗವನ್ನು ಶುಚಿಗೊಳಿಸುತ್ತಾರೆ.

ಹೌದು. ತಾಲೂಕಿನ ಮಜ್ಜಿಗುಡ್ಡ ಗ್ರಾಮದ ಅಂಬೇಡ್ಕರ್ ನಗರದ ರಸ್ತೆಯಲ್ಲಿ ಕಸದ ರಾಶಿಯೇ ಇಂದ ಕಾರಣ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಬೇಕಾದರೆ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿತ್ತು. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಹಾಗೂ ಪಬ್ಲಿಕ್ ನೆಕ್ಸ್ಟ್ ವರದಿಗಾರರು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಗಮನಕ್ಕೆ ತಂದಿದ್ದು, ಇದರ ಪ್ರತಿಫಲವಾಗಿ ಗ್ರಾಮದಲ್ಲಿ ನಿನ್ನೆ ಜೆಸಿಬಿ ಯಂತ್ರದಿಂದ ಅಂಬೇಡ್ಕರ್ ನಗರದಲ್ಲಿದ್ದ ಕಸದರಾಶಿಯನ್ನು ತೆರವುಗೊಳಿಸಿ ಅಲ್ಲಿನ ನಿವಾಸಿಗಳ ಸಮಸ್ಯೆಯನ್ನು ದೂರ ಮಾಡಿದ್ದಾರೆ.

ನಿಮ್ಮ ಪಬ್ಲಿಕ್ ನೆಸ್ಟ್ ಸುದ್ದಿ ಮಾಡಿದ ತಕ್ಷಣ ಅಧಿಕಾರಿಗಳು ಸ್ಪಂದನೆ ನೀಡಿ ತೊಂದರೆ ನಿವಾರಣೆ ಮಾಡಿದ್ದಕ್ಕೆ ಪಬ್ಲಿಕ್ ನೆಕ್ಸ್ಟ್ ಕಡೆಯಿಂದ ಧನ್ಯವಾದಗಳು ಹಾಗೂ ಸುದ್ದಿ ಪ್ರಸಾರ ಮಾಡಿ ಸಮಸ್ಯೆಯನ್ನು ಬಗೆಹರಿಸಿದಕ್ಕೆ ಅಲ್ಲಿನ ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ಗೆ ಧನ್ಯವಾದಗಳನ್ನು ಸಲ್ಲಿಸಿದರು.

ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ

Edited By : Somashekar
Kshetra Samachara

Kshetra Samachara

20/07/2022 03:29 pm

Cinque Terre

13.52 K

Cinque Terre

0

ಸಂಬಂಧಿತ ಸುದ್ದಿ