ವರದಿ: ಉದಯ ಗೌಡರ
ಕಲಘಟಗಿ: ಪಟ್ಟಣದ ಸೆಂಟ್ರಲ್ ಬ್ಯಾಂಕಿನಲ್ಲಿ ಇಂದು ಕರೆಂಟ್ ಇಲ್ಲದ ಕಾರಣ ಜನರು ಬ್ಯಾಂಕಿನಲ್ಲಿ ಗಂಟೆಗಟ್ಟಲೆ ಕಾಯುವಂತಾಯಿತು. ಸಾರ್ವಜನಿಕರು ದುಡ್ಡು ತೆಗೆಯಲಿಕ್ಕೆ ಮುಂಜಾನೆ ಬಂದವರು ಮಧ್ಯಾಹ್ನದ ವರೆಗೂ ಬ್ಯಾಂಕಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಬಂದೊದಗಿತ್ತು.
ಇಂದು ಕಲಘಟಗಿ ಪಟ್ಟಣದಲ್ಲಿ ಕರೆಂಟ್ ಇಲ್ಲದ ಕಾರಣ ಇನ್ ವರ್ಟರ್ ಬ್ಯಾಟರಿ ಕೂಡ ರಿಪೇರಿ ಬಂದಿದ್ದು, ಇದರಿಂದಾಗಿ ಈ ಸಮಸ್ಯೆ ಆಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
ಮುಂಜಾನೆಯಿಂದ ತಮ್ಮ ಕೆಲಸವನ್ನು ಬಿಟ್ಟು ಬಂದಿರುವ ಜನರು ಮಧ್ಯಾಹ್ನದ ವರೆಗೂ ಕಾದು, ಬ್ಯಾಂಕ್ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇಂತಹ ಪರಿಸ್ಥಿತಿ ಇದೇನೂ ಹೊಸತಲ್ಲ. ಪ್ರತಿದಿನ ಸರ್ವರ್ ಇರಲ್ಲ ಅಂತ ಹೇಳುತ್ತಾರೆ ಎಂದು ಗ್ರಾಹಕರು ತಿಳಿಸಿದರು.
Kshetra Samachara
04/07/2022 09:37 pm