ಹುಬ್ಬಳ್ಳಿ: ನಮಸ್ಕಾರ್ ರೀ ಪಾ ಹುಬ್ಳಿ ಜನತೆಗೆ... ನಮ್ ಪಾಲಿಕೆ ಅಧಿಕಾರಿಗಳ ಚರ್ಮ್ ಭಾಳ ದಪ್ಪ ಐತಿ ನೋಡ್ರಿ..! ಪಾಪ ಕಣ್ರೀ, ಈ ಏರಿಯಾದಲ್ಲಿನ ಜನಾ ಅದ ಹೇಗ್ ಬದಕ್ತಾರೊ ಗೊತ್ತಿಲ್ಲ..! ಯಾಕೆಂದ್ರೆ ಸರಿಯಾದ ರೋಡ್ ಇಲ್ಲ, ಚರಂಡಿ ನೀರು ಮನಿ ಒಳಗ ನುಗ್ತಾ ಇದೆ. ಇಷ್ಟೊಂದು ತೊಂದರೆ ಅನುಭವಿಸುತ್ತಿರುವುದು ವಾರ್ಡ್ ನಂಬರ 31ರ ಜನ್ರು.
ಹೌದು... ʼಪಬ್ಲಿಕ್ ನೆಕ್ಸ್ಟ್ʼ ಇವತ್ ವಾರ್ಡ್ ನಂಬರ್ 31ರಲ್ಲಿ ಬರುವ ಹನುಮಂತ ನಗರದ ಸನ್ಮತಿ ಲೇಔಟ್ ನತ್ತ ಹೋದಾಗ್ ಗೊತ್ತಾಯ್ತಿ... ಇಷ್ಟೊಂದು ಸಮಸ್ಯೆಗಳಲ್ಲೂ ಇಲ್ಲಿನ್ ಜನ, ಜೀವನ ನಡಸ್ತಾ ಇದಾರಂತ್. ಒಂದ್ ಕಡೆ ನೋಡಿದ್ರ್, ಚರಂಡಿ ನೀರು ರಸ್ತೆ ತುಂಬಿ ಮನಿ ಒಳಗ್ ನುಗ್ತಾ ಇದೆ.
ಇನ್ನೊಂದಡೆ ನೋಡಿದ್ರ್, ಸರಿಯಾದ್ ರೋಡ್ ಇಲ್ಲ. ಚರಂಡಿ ಓಪನ್ ಇರೊದ್ರಿಂದ್ ಮಕ್ಕಳನ್ನು ಹೊರಗೆ ಬಿಡಲೂ ಭಯ!
ಅಲ್ಲಿನ ಜನರೆಲ್ಲರೂ ಪಾಲಿಕೆ ಸದಸ್ಯರಿಗೆ, ಅಧಿಕಾರಿಗಳಿಗೆ ಹಿಡಿಶಾಪವನ್ನೇ ಹಾಕುತ್ತಿದ್ದಾರೆ.
ಇಲ್ಲಿನ ಜನ್ರು ಪಾಲಿಕೆಗೆ ಸರಿಯಾಗಿ ಟ್ಯಾಕ್ಸ್ ತುಂಬುತ್ತಿದ್ದರೂ ಪಾಲಿಕೆಯವರು ಮಾತ್ರ ಕ್ಯಾರೇ ಎನ್ನುತ್ತಿಲ್ಲವಂತೆ. ಅಷ್ಟೇ ಅಲ್ದೆ, ಪಾಲಿಕೆ ಸದಸ್ಯರ ಮನೆಗೆ ಹೋಗಿ ಮನವಿ ಮಾಡಿದ್ರೂ ಏನು ಪ್ರಯೋಜನ ಆಗಿಲ್ವಂತೆ. ಜನಪ್ರತಿನಿಧಿಗಳೇ- ಅಧಿಕಾರಿಗಳೇ, ಇತ್ತ ಚಿತ್ತ ಹರಿಸಿ ಶೀಘ್ರ.
- ಈರಣ್ಣ ವಾಲಿಕಾರ 'ಪಬ್ಲಿಕ್ ನೆಕ್ಸ್ಟ್ʼ
Kshetra Samachara
07/06/2022 05:35 pm