ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಮಳೆ ತಂದ ಅವಾಂತರ; ಮನೆಗೆ ನುಗ್ಗಿದ ನೀರು

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಕಳೆದ ಹಲವು ದಿನಗಳಿಂದಲೂ ಶಾಂತವಾಗಿದ್ದ ವರುಣ ಮತ್ತೇ ತನ್ನ ಆರ್ಭಟವನ್ನು ಇಂದು ತೋರಿಸಿದ್ದಾನೆ. ಇದರಿಂದ ಜನರ ಜೀವನ ಕೂಡ ಅಸ್ತವ್ಯಸ್ತಗೊಂಡಿದೆ.

ಹೌದು. ನಗರದಲ್ಲಿ ಇಂದು ಸುರಿದ ಭಾರಿ ಮಳೆಯಿಂದಾಗಿ ಮನೆ ಒಳಗೆ ನೀರು ನುಗ್ಗುತ್ತಿದೆ. ನಗರದ ಹಳೇ ಹುಬ್ಬಳ್ಳಿಯ ಮಾರುತಿ ನಗರದಲ್ಲಿನ ಕೆಲವು ಮನೆಗಳಿಗೆ ಮಳೆಯ ನೀರು ನುಗ್ಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿನ ನಿವಾಸಿಗಳು ತಮ್ಮ ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಹರ ಸಾಹಸ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಮಳೆ ಆದಾಗಲೆಲ್ಲ ಈ ಪ್ರದೇಶದ ಜನರ ಪರಿಸ್ಥಿತಿ ಮಾತ್ರ ಹೇಳತಿರದ್ದಾಗಿದೆ.

Edited By :
Kshetra Samachara

Kshetra Samachara

02/06/2022 09:19 pm

Cinque Terre

59.67 K

Cinque Terre

2

ಸಂಬಂಧಿತ ಸುದ್ದಿ