ಹುಬ್ಬಳ್ಳಿ: ಹುಬ್ಬಳ್ಯಾಗ ಹೆಂಗ ಬೇಕೋ ಹಂಗ ಓಡ್ಯಾಡೋಕೆ ಹೋಗಬ್ಯಾಡ್ರಿ. ಮೊದಲ ಹೇಳ್ತೇವಿ ಇಲ್ಲಿನ ಪಾಲಿಕೆಯವರ ಹಾಗೂ ಸ್ಥಳೀಯ ಅಧಿಕಾರ ಬೇಜವಾಬ್ದಾರಿಯಿಂದ ಏನ ಬೇಕಾದ್ರೂ ಆಗಬಹುದು ನೋಡ್ರಿ... ಅರೇ... ಯಾಕ್ ಹಿಂಗ ಹಗ್ಗದ ಹಾವು ಬಿಡ್ತಿದ್ದೀರಾ ಅಂತೀರಾ..? ಇದು ಹಗ್ಗದ ಹಾವಲ್ಲ ಹುಬ್ಬಳ್ಳಿಯ ವಸ್ತು ಸ್ಥಿತಿ ಐತಿ ನೋಡ್ರಿ..
ಹೌದ್ರಿ. ಹಾಗಿದ್ದರೇ ನೋಡಿ ಬಿಡ್ರಿ ಇಲ್ಲಿನ ಅವ್ಯವಸ್ಥೆ ವಿಡಿಯೋ. ನೋಡ್ರಿ, ನೋಡ್ರಿ, ಈಗ ಇನ್ನೂ ಸ್ವಲ್ಪ ಹೊತ್ತಿಗೆ ಈ ಕಂಬ ಬಿದ್ದ ಹೊಕ್ಕೈತಿ. ಆದ್ರೆ ಇಲ್ಲಿಯೇ ಪಾಲಿಕೆ ಇದ್ರೂ ಇವರ ಗಮನಕ್ಕೆ ಬಂದಿಲ್ಲ. ದಿನಕ್ಕೆ ಸಾವಿರಾರು ಜನ ಸಂತಿ, ಪ್ಯಾಟಿ, ಸ್ಕೂಲ್ ಅಂತ ಹೋಗೋದು ಬರೋದು ಮಾಡ್ತಾರ. ಯಾರರ ಮೈ ಮ್ಯಾಲೆ ಬಿತ್ತ ಅಂದ್ರ ಕಂಬ ನೆಲಕ್ಕೆ ಬೀಳುವುದರಲ್ಲಿ ಹೆಣ ಬಿಳ್ತಾವ. ಇದನ್ನು ನೋಡಿದವರು ಏನ ಅಂತಾರ ಕೇಳ್ರಿ..
ಹಿಂಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂದ್ ದೊಡ್ಡದಾದ ಕಂಬವೊಂದು ಬಾಗಿ ಇನ್ನೇನೂ ಬಿದ್ದು ಹೋಗುವಂಗ ಇದ್ರೂ ಯಾರೊಬ್ಬರೂ ಎದ್ದು ಬಂದು ನೋಡವಲ್ಲರ. ಹಿಂಗಾದ್ರೆ ಬಸ್‌ನಿಂದ ಇಳಿಯುವವರು ಅಥವಾ ಶಾಲಿಗೆ ಹೋಗುವ ಮಕ್ಕಳು ಬಲಿಯಾಗೋದು ಖಂಡಿತ.
ಕಮಿಷನರ್ ಸಾಹೇಬ್ರೆ ನೀವು ಸ್ವಲ್ಪ ನೋಡ್ರಿ. ಇಲ್ಲಿ ಇಂತಹದೊಂದು ಅಪಘಾತ ಕೈಮಾಡಿ ಕರಿತೈತಿ. ಹಿಂಗಿದ್ರೂ ನಿಮ್ಮ ಸಿಬ್ಬಂದಿ ಕೈ ಕಟ್ಟಿಕೊಂಡು ಕುಂತಾರ. ಕೂಡಲೇ ಸರಿಪಡಿಸಿ ಅನ್ನೋದು ಪಬ್ಲಿಕ್ ಆಗ್ರಹ..
Kshetra Samachara
31/05/2022 09:27 pm