ಧಾರವಾಡ: ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ
ಜಲ ಜೀವನ್ ಮಿಷನ್ ಯೋಜನೆಗೆ ಧಾರವಾಡ ತಾಲೂಕಿನ ಹಳೆತೇಗೂರು ಗ್ರಾಮದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಯೋಜನೆ ಸಂಪೂರ್ಣ ವಿಫಲವಾಗಿದೆ. ನಲ್ಲಿಗಳ ಮೂಲಕ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಅನೇಕ ಗ್ರಾಮಗಳಲ್ಲಿ ಈ ಯೋಜನೆ ವಿಫಲವಾಗಿದ್ದು, ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ಮಾಡಿ ಜನರಿಂದ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ವೇಳೆ ಸಭೆ ನಡೆಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಪಿಡಿಓ ಈ ಯೋಜನೆ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲು ಹರಸಾಹಸವನ್ನೇ ಪಡಬೇಕಾಯಿತು.
ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಮಾತು ಕೇಳದ ಗ್ರಾಮಸ್ಥರು ಜೆಜೆಎಂ ಯೋಜನೆಗೆ ತಮ್ಮ ವಿರೋಧ ಇರುವುದನ್ನು ಸ್ಪಷ್ಟಪಡಿಸಿದರು.
Kshetra Samachara
10/05/2022 08:56 am