ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: 'ನೀರಿನ ಸಂರಕ್ಷಣೆ ಮುಖ್ಯ'

ಕುಂದಗೋಳ: ನಾವು ಇಂದಿನ ದಿನದ ಮಹತ್ವ ಅರಿಯಬೇಕಾದರೆ ನಿನ್ನೆಯ ದಿನ ಮಹತ್ವ ತಿಳಿಯಬೇಕು. ಕಾರಣ ನಿನ್ನೆ ವಿಶ್ವ ಅರಣ್ಯ‌ ದಿನ ಇಂದು ವಿಶ್ವ ಜಲ ದಿನ. ಈ ಎರಡು ದಿನದ ಮಹತ್ವ ತಿಳಿಯುವುದು ಮುಖ್ಯ ಎಂದು ಹಿರಿಯ ದಿವಾನಿ ನ್ಯಾಯಾಧೀಶ ಪಿ.ಜೆ.ಪರಮೇಶ್ವರ ಹೇಳಿದ್ದಾರೆ.

ಕುಂದಗೋಳ ಪಟ್ಟಣ ಪಂಚಾಯಿತಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ನಡೆದ ವಿಶ್ವ ಜಲ ದಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅವರು, ನೀರಿಗೂ ಯಾರಿಗೆ ಬೇಡಾ ಹೇಳಿ ಭೂಮಿಯಲ್ಲಿನ ಸಕಲ ಜೀವರಾಶಿಗಳಿಗೂ ನೀರು ಮುಖ್ಯ. ಈ ಭೂಮಿಯ ಶೇ.3 ಭಾಗದಲ್ಲಿ ಶೇ.2 ನೀರಿದೆ. ಅಂದರೆ ಶೇ. 1 ಭೂಮಿ ಇದೆ ಅಂದ್ರೆ ನಾವು ನೀರನ್ನು ಮಿತವ್ಯಯವಾಗಿ ಬಳಸಬೇಕಾಗಿರುವುದು ಮುಖ್ಯವಾಗಿದೆ. ಕಾರಣ ಎಲ್ಲಾ ನೀರು ಶುದ್ಧ ನೀರಲ್ಲಾ ಎಂದರು.

ಜೆಎಮ್ಎಫ್‌ಸಿ ನ್ಯಾಯಾಧೀಶೆ ಅನುರಾಧಾ ಟಿ.ಎಚ್. ಹಿರಿಯ ನ್ಯಾಯವಾದಿ ಜೆ.ಬಿ.ಸೊರಟೂರ, ಇನ್ನೋರ್ವ ಹಿರಿಯ ನ್ಯಾಯವಾದಿ ಉಮೇಶ್ ನೀರಿನ ಮೌಲ್ಯ ಕುರಿತು ಪಟ್ಟಣ ಪಂಚಾಯಿತಿ ಕಾರ್ಯಕ್ರಮದಲ್ಲಿ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಕೋಕಾಟೆ, ಉಪಾಧ್ಯಕ್ಷ ಹಣುಮಂತಪ್ಪ ರಣತೂರ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

22/03/2022 09:51 pm

Cinque Terre

25.29 K

Cinque Terre

0

ಸಂಬಂಧಿತ ಸುದ್ದಿ