ಅಳ್ನಾವರ: ಸ್ಥಳದಲ್ಲಿಯೇ ಸಾಧ್ಯವಾದಷ್ಟು ಮಟ್ಟಿಗೆ ಸಾರ್ವಜನಿಕರ ಕೆಲಸಗಳನ್ನ ಬಗೆ ಹರಿಸುವುದು ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶ. ಇದರ ಸದುಪಯೋಗ ವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಅಳ್ನಾವರ ತಹಶೀಲ್ದಾರ್ ಹಾಗೂ ಅಮರೇಶ ಪಮ್ಮಾರ ಹೇಳಿದರು.
ಬೆನಚಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಾರ್ವಜನಿಕರಿಗೆ ಉಪಯುಕ್ತವಾಗುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಗಳನ್ನ ಮಾಡಲಾಗುವುದು ಎಂದರು. ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಸುಮಾರು 25 ವಿವಿಧ ಇಲಾಖೆ ಯವರು ಬರಬೇಕಾಗಿತ್ತು ಆದರೆ ಕೇವಲ 18 ಇಲಾಖೆ ಅಧಿಕಾರಿಗಳು ಮಾತ್ರ ಹಾಜರಿದ್ದರು.
Kshetra Samachara
21/03/2022 01:54 pm