ನವಲಗುಂದ: ನೀರು ಜೀವಜಲ. ನೀರು ಮನುಷ್ಯನ ಜೀವನಕ್ಕೆ ಅತ್ಯಮೂಲ್ಯ ಎಂದೆಲ್ಲ ಸರ್ಕಾರ ನೀರಿನ ಬಗ್ಗೆ ಅದೆಷ್ಟೋ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುತ್ತೆ. ಆದ್ರೆ ಈಗ ನವಲಗುಂದ ಪಟ್ಟಣದ ಗವಿಮಠದ ಬಳಿ ಇರುವ ನೀರಿನ ಟ್ಯಾಂಕ್ ತುಂಬಿ ಥೇಟ್ ಜಲಪಾತದಂತೆ ಹೊರಚೆಲ್ಲುತ್ತಿದೆ. ಈ ದೃಶ್ಯ ನೋಡಿದ್ರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಇದೆ ಎಂಬುದು ಗೊತ್ತಾಗುತ್ತೆ.
ಈ ರೀತಿ ನೀರಿನ ಟ್ಯಾಂಕ್ ತುಂಬಿ ಹರಿಯುತ್ತಿರುವುದು ಇದೇ ಮೊದಲ ಬಾರಿಯಲ್ಲ. ಹದಿನೈದು ದಿನಕ್ಕೆ ಒಂದೆರಡು ಬಾರಿ ಈ ರೀತಿ ನೀರು ತುಂಬಿ ಹೊರಚೆಲ್ಲುತ್ತಲೇ ಇರುತ್ತಂತೆ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ನೀರು ಟ್ಯಾಂಕ್‌ಗೆ ನೀರು ಸರಬರಾಜು ನಿಲ್ಲಿಸುತ್ತಾರೆ. ಮತ್ತೆ ನೀರು ಬಂದಾಗ ಇದೇ ರೀತಿ ನೀರು ಪೋಲಾಗುತ್ತೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡಿ, ವ್ಯರ್ಥವಾಗುತ್ತಿರುವ ನೀರನ್ನು ಉಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Kshetra Samachara
13/03/2022 08:04 pm