ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ-ಹುಬ್ಬಳ್ಳಿ-ತೆನೈಘಾಟ್ ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣ: ಕೇಂದ್ರ ಸಚಿವ ಜೋಶಿ

ಹುಬ್ಬಳ್ಳಿ: ಹೊಸಪೇಟೆ-ಹುಬ್ಬಳ್ಳಿ-ತೆನೈಘಾಟ ನಡುವಿನ ಜೋಡಿ ರೈಲು (doubling) ಮಾರ್ಗದ 327.6 ಕಿ.ಮೀ ಉದ್ದದ ಯೋಜನೆ ಪೂರ್ಣ ಗೊಂಡಿದೆ. 928.85 ಕೋಟಿ ವೆಚ್ಚ ಕಾಮಗಾರಿ ಇದಾಗಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದ್ಯ ವಯಾ ಹುಬ್ಬಳ್ಳಿ-ಧಾರವಾಡದ ಹೊಸಪೇಟೆ- ತೆನೈಘಾಟ- ವಾಸ್ಕೊ 870ಕಿ.ಮೀ ರೈಲು ಮಾರ್ಗ ವಿದ್ಯುದೀಕರಣದ ಕಾಮಗಾರಿ ಚಾಲನೆಯಲ್ಲಿದೆ. ಇದರ ವೆಚ್ಚ 608.63 ಕೋಟಿ ರೂ ವ್ಯಯಿಸಲಾಗುತ್ತಿದೆ. ಈ ಯೋಜನೆಯಲ್ಲಿ ಉಪ ಯೋಜನೆಗಳಾಗಿ ಹೊಸಪೇಟೆ- ಹುಬ್ಬಳ್ಳಿ ಮಾರ್ಗ ವಿದ್ಯುದೀಕರಣಕ್ಕಾಗಿ 235.29 ಕೋಟಿ ಹಾಗೂ ಹುಬ್ಬಳ್ಳಿ- ಲೋಂಡಾ ರೈಲು ಮಾರ್ಗದ ವಿದ್ಯುದೀಕರಣಕ್ಕಾಗಿ 218.74 ಕೋಟಿ ವ್ಯಯಿಸಲಾಗುತ್ತಿದೆ. ಈ ಎರಡು ಯೋಜನೆಗಳು ನಿರ್ಮಾಣದ ಹಂತದಲ್ಲಿವೆ. ತೆನೈಘಾಟನಿಂದ ವಾಸ್ಕೋವರೆಗಿನ 154.60 ಕೋಟಿಯ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಒಟ್ಟಾರೆ ಈ ರೈಲು ಮಾರ್ಗ ವಿದ್ಯುದೀಕರಣ 608.63 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ಈ ಯೋಜನೆಯ ಸಾಕಾರಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧನ್ಯವಾದ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

18/12/2021 05:03 pm

Cinque Terre

10.89 K

Cinque Terre

4

ಸಂಬಂಧಿತ ಸುದ್ದಿ