ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ.ಸ್ವಚ್ಛ ನಗರದ ಕನಸಿಗೆ ಮುನ್ನುಡಿ ಬರೆದಿರುವ ಈ ಪಾಲಿಕೆ ಈಗ ಅವಳಿನಗರದ ಸ್ವಚ್ಚತೆಗೆ ಮತ್ತೊಂದು ಶಿಸ್ತು ಕ್ರಮವನ್ನು ಕೈಗೆತ್ತಿಕೊಂಡಿದೆ.ಈ ನಿಯಮ ಉಲ್ಲಂಘಿಸಿದರೇ ಬಾರಿ ದಂಡ ತೆರಬೇಕಾದಿತು ಎಚ್ಚರ.. ಹಾಗಿದ್ದರೇ ಪಾಲಿಕೆ ಕೈಗೆತ್ತಿಕೊಂಡಿರುವ ಕ್ರಮ ಯಾವುದು ಅಂತೀರಾ ಈ ಸ್ಟೋರಿ ನೋಡಿ...
ಸ್ವಚ್ಛ ನಗರ ಕನಸಿಗೆ ಮುನ್ನುಡಿ ಬರೆದಿರುವ ಹು-ಧಾ ಮಹಾನಗರ ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೇ ದಂಡ ವಿಧಿಸಲು ಮುಂದಾಗಿದೆ.ಹೌದು..ನಗರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕುವ ನಿವಾಸಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಈಗಾಗಲೇ ದಂಡ ವಿಧಿಸುವ ಕೆಲಸವನ್ನು ಪಾಲಿಕೆ ಅಧಿಕಾರಿಗಳು ಶುರು ಮಾಡಿದ್ದಾರೆ.ನಗರವನ್ನು ಸುಂದರ ಹಾಗೂ ರೋಗ ಮುಕ್ತವಾಗಿಸಲು ಮಹಾನಗರ ಪಾಲಿಕೆ ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುತ್ತಿದೆ.ಆದರೂ ಜನರು ಮಾತ್ರ ಎಲ್ಲೆಂದರಲ್ಲಿ ಕಸ ಚೆಲ್ಲುವ ಚಾಳಿಯನ್ನು ಬಿಟ್ಟಿಲ್ಲ.ಅಲ್ಲದೇ ಕಸ ಸಂಗ್ರಹಕ್ಕೆ ಮನೆ ಬಳಿ ಬರುವ ವಾಹನದಲ್ಲಿ ಕಸ ಹಾಕುವ ಬದಲು ರಾತ್ರಿ ಸಮಯದಲ್ಲಿ ರಸ್ತೆಗಳ ಅಕ್ಕಪಕ್ಕದಲ್ಲಿ ಕಸ ಹಾಕುತ್ತಿದ್ದಾರೆ.ಇಂತಹವರಿಗೆ ತಕ್ಕಪಾಠ ಕಲಿಸಲು ಐದು ಸಾವಿರದಿಂದ 25 ಸಾವಿರ ದಂಡ ವಿಧಿಸಲು ಮುಂದಾಗಿದೆ.
ಬೃಹತ್ ತ್ಯಾಜ್ಯಕ್ಕೆ 25 ಸಾವಿರ ರೂ.ಸಾಲಿಡ್ ವೇಸ್ಟ್ ಗೆ ಐದು ಸಾವಿರ ರೂಪಾಯಿ ದಂಡವಿದೆ.ವಲಯವಾರು ಪರಿಸರ ಅಭಿಯಂತಕರು,ಆರೋಗ್ಯ ನಿರೀಕ್ಷಕರು ಹಾಗೂ ಪೌರ ಕಾರ್ಮಿಕರು ರಾತ್ರಿ ಬಡಾವಣೆಗೆ ತೆರಳಿ ಗಮನಿಸಲು ಆರಂಭಿಸಿದ್ದಾರೆ.ಕಸ ಹಾಕುವವರ ಮಾಹಿತಿ ಪಡೆದು ಆಯಾ ವ್ಯಾಪ್ತಿ ಪೊಲೀಸರಿಗೆ ತಿಳಿಸಲಾಗುತ್ತದೆ.ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ದಂಡ ವಿಧಿಸಲಾಗುತ್ತದೆ.ಒಂದು ವೇಳೆ ಸ್ಥಳದಲ್ಲೇ ದಂಡ ನೀಡದಿದ್ದರೇ ವಾಹನ ಸೀಜ್ ಮಾಡುವುದು ಇಲ್ಲವೇ ದಂಡವನ್ನು ಆಸ್ತಿ ಕರದಲ್ಲಿ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಒಟ್ಟಿನಲ್ಲಿ ಹು-ಧಾ ಮಹಾನಗರವನ್ನು ಸ್ವಚ್ಛ ಮಾಡಲು ಮಹಾನಗರ ಪಾಲಿಕೆ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರಕ್ಕೆ ಪಾಲಿಕೆ ನಿಯಮಗಳನ್ನು ಪಾಲಿಸಿ ಸಾರ್ವಜನಿಕರು ಅವಳಿನಗರವನ್ನು ಸ್ವಚ್ಛ ಹಾಗೂ ರೋಗ ಮುಕ್ತ ನಗರವನ್ನಾಗಿ ಮಾಡಲು ಕೈ ಜೋಡಿಸಬೇಕಿದೆ..
Kshetra Samachara
08/02/2021 03:57 pm