ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನೆಲಹಾಸು ಕಿತ್ತೋದ ತಹಶೀಲ್ದಾರ ಕಚೇರಿಯ ದಾಹಕ್ಕೆ ನೀರಿಲ್ಲ

ಕುಂದಗೋಳ : ಪ್ರತಿ ವರ್ಷವು ಮಳೆಗಾಲ ಬಂತಂದ್ರೇ ಸಾಕು ಸತತ ತಿಂಗಳು ಗಟ್ಟಲೇ ಕಟ್ಟಡದ ಸುತ್ತ ನೀರನ್ನು ತುಂಬಿಕೊಂಡು ಮಧ್ಯೆ ನಿಲ್ಲುವ ಇಲಾಖೆಯೊಂದರ ಪರಿಸ್ಥಿತಿ ಏನಾಗಬೇಡ ? ಹೇಳಿ.

ಹೀಗೆ ಕುಂದಗೋಳ ಪಟ್ಟಣದ ಮುಖ್ಯ ಇಲಾಖೆ ಕಟ್ಟಡವೊಂದು ಅತಿವೃಷ್ಟಿ ಹೊಡೆತಕ್ಕೆ ಸತತವಾಗಿ ನೀರಿನ ಸೆಳೆವಿಗೆ ಸಿಕ್ಕ ಪರಿಣಾಮ ಕಟ್ಟಡವೇ ಎಲ್ಲೇಂದರಲ್ಲಿ ಬಿರುಕು ಬಿಟ್ಟು, ಕಟ್ಟಡ ನೆಲಹಾಸು ಟೈಲ್ಸ್' ಕಲ್ಲುಗಳು ಕೀಳ ಹಂತಿವೆ.

ಕುಂದಗೋಳ ತಹಶೀಲ್ದಾರ ಕಚೇರಿಯೆ ಈ ಸಮಸ್ಯೆಗೆ ತುತ್ತಾಗಿದ್ದು, ತಹಶೀಲ್ದಾರ ಕೊಠಡಿ ಕೋರ್ಟ್ ಹಾಲ್ ಮುಂಭಾಗದಲ್ಲೇ ಈ ರೀತಿ ಕಲ್ಲುಗಳು ಕಿತ್ತು ವಾರ ಕಳೆದಿದ್ದು, ಕಿತ್ತೋದ ನೆಲಹಾಸಿನ ಪಕ್ಕ ಮತ್ತಷ್ಟು ದೊಡ್ಡ ದೊಡ್ಡ ಕಲ್ಲುಗಳನ್ನಿಟ್ಟಿದ್ದು ಯಾವಾಗ ? ಯಾರು ? ಎಡವಿ ಬಿದ್ದು ಅಪಾಯಕ್ಕೆ ತುತ್ತಾಗುವರೋ ಗೊತ್ತಿಲ್ಲ ಬಿಡಿ.

ಈ ಇಲಾಖೆಯ ಇನ್ನೊಂದು ವಿಚಾರ ಏನಪ್ಪಾ ಅಂದ್ರೆ ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕುಡಿಯಲು, ಮತ್ತೆ ಶೌಚಕ್ಕೆ ಬಳಸಲು ನೀರಿಲ್ಲ ಇಲ್ನೋಡಿ ಹೀಗೆ ನೀರು ಜಿಣುಗುತ್ತಿರುವ ನಲ್ಲಿಯನ್ನು ಕಚೇರಿ ಒಳಗೆ ಸಂಪರ್ಕ ಮಾಡದ ಕಾರಣ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ಈ ಬಗ್ಗೆ ಸಂಬಂಧಪಟ್ಟ ತಾಲೂಕು ಆಡಳಿತ ಗಮನಿಸಿ ಅವ್ಯವಸ್ಥೆಗೆ ಸಿಲುಕಿದ ಕಟ್ಟಡ ಹಾಗೂ ಸಿಬ್ಬಂದಿಗಳ ನೀರಿನ ದಾಹ ಎರಡಕ್ಕೂ ಬ್ರೇಕ್ ಹಾಕಿ.

Edited By : Manjunath H D
Kshetra Samachara

Kshetra Samachara

01/02/2021 02:42 pm

Cinque Terre

43.95 K

Cinque Terre

1

ಸಂಬಂಧಿತ ಸುದ್ದಿ