ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್‌ಗಳ ಸಮಸ್ಯೆಯಂತೂ ಹೇಳ ತೀರದಾಗಿದೆ.ಅಲ್ಲದೇ ಕೊರೋನಾ ವಾರಿಯರ್ಸ್ ವಸತಿ ಹತ್ತಿರದ ಸಮಸ್ಯೆಗಳನ್ನು ನೋಡಿದರೆ ನಿಜಕ್ಕೂ ಬೇಸರ ಮೂಡುವುದು ಖಂಡಿತ.
ಹೌದು... ಎಲ್ಲೆಂದರಲ್ಲಿ ಬಿದ್ದಿರುವ ಕಸ, ದುರ್ವಾಸನೆಯಿಂದ ಕೂಡಿದ ಕರೋನಾ ವಾರಿಯರ್ ವಸತಿಗಳ ಆವರಣ.ಇಂತಹ ಅವ್ಯವಸ್ಥೆಗೆ ಸಾಕ್ಷಿಯಾಗಿದೆ ಕಿಮ್ಸ್ ಆವರಣದ ದೀಪಾ ಹಾಸ್ಟೆಲ್ ಪಕ್ಕದ ವಸತಿ ಸಂಖ್ಯೆ 7ರ ಗೋಳು. ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದ್ದು,ಕುಡಿಯುವ ನೀರು ಸಹ ಕಲುಷಿತವಾಗಿದೆ. ಹಾವು, ಹಂದಿ, ಬೀಡಾಡಿ ದನಗಳು ಮತ್ತು ಹೆಗ್ಗಣಗಳ ಕಾಟ ಹೆಚ್ಚಾಗಿದೆ. ಕಾರ್ಯ ನಿರ್ವಹಿಸಿ ಬರುವ ವಾರಿಯರ್ಸ್ ಗಳ ನೆಮ್ಮದಿಗೆ ಕುತ್ತು ತಂದಿರುವ ಕೊಳಚೆಯಿಂದ ದಿನವೂ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡು ಜೀವನ ನಡೆಸುತ್ತಿದ್ದಾರೆ.
ಅಲ್ಲದೆ ಮೇಲ್ಛಾವಣಿ ಸೋರುತ್ತಿದ್ದರೂ ಆಡಳಿತ ಮಂಡಳಿ ಗಮನ ಹರಿಸುತ್ತಿಲ್ಲ.ಹಲವು ರೋಗಕ್ಕೆ ವಾರಿಯರ್ಸ್ ಗಳ ಕುಟುಂಬ ತುತ್ತಾಗುತ್ತಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ಅಧಿಕಾರಿಗಳು ಕಿಮ್ಸ್ ಸಿಬ್ಬಂದಿಗಳ ಹಾಗೂ ಕೊರೋನಾ ವಾರಿಯರ್ಸ್ ಕುಟುಂಬದ ಹಿತಾಸಕ್ತಿ ಕಾಪಾಡಬೇಕಿದೆ.
Kshetra Samachara
14/10/2020 02:27 pm