ಅಬ್ಬಾ ! ಈ ಸರ್ಕಾರಿ ಆಸ್ತಿ, ಸಾರ್ವಜನಿಕರ ಸ್ವತ್ತು ನಿರ್ಮಾಣ ಅಂದ್ರೇ ಈ ಸರ್ಕಾರಿ ಅಧಿಕಾರಿಗಳಿಗೆ ಯಾಕಿಷ್ಟು ನಿರ್ಲಕ್ಷ್ಯ ? ಯಾಕೆ ಈ ತರಹ ಬೇಕಾಬಿಟ್ಟಿ ಕಾಮಗಾರಿ ? ಅಂತ್ಹೇಳಿ ಜನಾ ಸರ್ಕಾರಿ ಅಧಿಕಾರಿಗಳಿಗೆ ಪ್ರಶ್ನೇ ಮಾಡ್ತಾ ಇದ್ದಾರೆ ನೋಡಿ.
ಅರೆ.! ಯಾಕ್ರಿ ಯಾವ ವಿಷಯ ಅಂದ್ರಾ ? ಇದೇ ರೀ ನಮ್ಮ ಕುಂದಗೋಳ ರೈತ ಸಂಪರ್ಕ ಕೇಂದ್ರದ ಸುತ್ತಲೂ 5 ಲಕ್ಷ ರೂಪಾಯಿ ಖರ್ಚು ಮಾಡಿ ಕಟ್ಟಿದಂತಹ ಕಾಂಪೌಂಡ್ ಗೋಡೆ ನಿರ್ಮಾಣ ಆಗಿ ಎರಡು ವರ್ಷ ಪೂರೈಸುವ ಮುನ್ನ ಬಿರುಕು ಬಿಟ್ಟಿದೆ. ನಾಳೆ ಮಳೆಗಾಲ ಮುಂದುವರೆದರೇ ಬೀಳಲೂಬಹುದು ನೋಡ್ರಿ.
ನಿತ್ಯ ಒಂದಿಲ್ಲೋಂದು ಕೆಲಸ ಹೊತ್ತು ರೈತ ಸಂಪರ್ಕ ಕೇಂದ್ರಕ್ಕೆ ಬರುವ ಸಾರ್ವಜನಿಕರು ಹಾಗೂ ರೈತ ಸಂಪರ್ಕ ಕೇಂದ್ರದ ರಕ್ಷಣೆಗಾಗಿ ನಿರ್ಮಿಸಿದ ಕಾಂಪೌಂಡ್ ಕೇವಲ ಎರಡು ವರ್ಷಕ್ಕೂ ಮೊದಲೇ ಬಿರುಕು ಬಿಟ್ಟಿರುವುದು ಕಳಪೆ ಕಾಮಗಾರಿನಾ ? ಎಂದು ಇದೇ ರೈತರು ಪ್ರಶ್ನೇ ಮಾಡ್ತಾ ಇದ್ದು ಸುತ್ತಲೂ ಬೆಳೆದು ಕಸದಲ್ಲೇ ಕಾಂಪೌಂಡ್ ಮುಚ್ಚಿ ಹೋಗ್ತಾ ಇದೆ.
ಇನ್ನೂ ಈ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದವರು ಜಿಪಂ ಸಿಇಒ ಅನುಷ್ಠಾನ ನೀಡಿದವರು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕಾರ್ಯಾಲಯದ ಅಧಿಕಾರಿಗಳು.
ಒಟ್ಟಾರೆ 5 ಲಕ್ಷ ಖರ್ಚು ಮಾಡಿದ ಕಾಂಪೌಂಡ್ ಗೋಡೆಯೊಂದು ಎಲ್ಲೇಂದರಲ್ಲಿ ಬೃಹತ್ ಬಿರುಕು ಬಿಟ್ಟು ಕೇವಲ ಸುಣ್ಣದಲ್ಲಿದೆ. ಈ ಬಗ್ಗೆ ಮೇಲಾಧಿಕಾರಿಗಳು ಗಮನಿಸಿ ಕಾಮಗಾರಿ ಕಳಪೆ ಇದ್ರೇ ಕ್ರಮ ಕೈಗೊಳ್ಳಿ.
ವಿಶೇಷ ಸ್ಟೋರಿ ಶ್ರೀಧರ್ ಪೂಜಾರ್, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/07/2022 05:38 pm