ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ನೆಮ್ಮದಿಯಿಂದ ಉಸಿರಾಡಲು ಸಾಧ್ಯವಿಲ್ಲ"; ಪಾಲಿಕೆ ಆಯುಕ್ತರೇ, ನಿಮ್ಮ ಸಿಬ್ಬಂದಿಗೆ ತಿಳಿ ಹೇಳಿ...

ಹುಬ್ಬಳ್ಳಿ-ಧಾರವಾಡ ಜನರ ಪರಿಸ್ಥಿತಿ ಹೇಗೆ ಆಗಿದೆ ಅಂದರೆ... ಇಲ್ಲಿನ ಜನರಿಗೆ ಸ್ವಚ್ಛಂದ ಗಾಳಿಯನ್ನೂ ಉಸಿರಾಡಲು ಸಂಕಷ್ಟ ಎದುರಾಗಿದೆ! ಯಾಕೆ ಅಂತೀರಾ ? ಇಲ್ಲಿದೆ ನೋಡಿ... ನರಕಯಾತನೆಯ ಅನಾವರಣ.

ಹೌದು... ಹುಬ್ಬಳ್ಳಿಯ ಪ್ರತಿಷ್ಠಿತ ನಗರದಲ್ಲಿ ಒಂದಾಗಿರುವ ಡಾಲರ್ಸ್ ಕಾಲೋನಿಯಲ್ಲಿ ಹಲವು ದಿನಗಳಿಂದಲೂ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಪರಿಸರ ನರಕ ಸದೃಶ್ಯವಾಗಿದೆ. ನೆಮ್ಮದಿಯಿಂದ ಉಸಿರಾಡಲು ಕೂಡ ಜನರು ಹೆಣಗಾಡುವಂತಾಗಿದೆ.

ಸುಮಾರು ಒಂದು ತಿಂಗಳಿನಿಂದಲೂ ಚರಂಡಿಯ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ಪಾಲಿಕೆ ಸಿಬ್ಬಂದಿ, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪ್ರತಿದಿನವೂ ಈ ದುರ್ವಾಸನೆ ನಡುವೆಯೇ ಜನರು ಜೀವನ ನಡೆಸುವಂತಾಗಿದೆ.

Edited By :
Kshetra Samachara

Kshetra Samachara

15/06/2022 12:47 pm

Cinque Terre

42.83 K

Cinque Terre

1

ಸಂಬಂಧಿತ ಸುದ್ದಿ