ಕಾರ್ಮಿಕರ ಅಭಿವೃದ್ಧಿ ಹಾಗೂ ಕಾರ್ಮಿಕರ ಏಳ್ಗೆ ದೃಷ್ಟಿಯಿಂದ ಕಾರ್ಮಿಕ ಅದಾಲತ್ 2.0 ಕಾರ್ಯಕ್ರಮ ಹಮ್ಮಿಕೊಂಡು ಸರ್ಕಾರದಿಂದ ಕಾರ್ಮಿಕರಿಗೆ ದೊರೆಯುವ ಪ್ರಯೋಜನ ತಿಳಿಸುವ ವೇದಿಕೆ ಇದಾಗಿದೆ ಎಂದು ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಹೇಳಿದರು.
ಅವರು ಕುಂದಗೋಳ ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಮಿಕ ಅದಾಲತ್ 2.0 ಕಾರ್ಯಕ್ರಮವನ್ನು ಕಾರ್ಮಿಕ ನಿರೀಕ್ಷಕಿ ರಜನಿ ಹಿರೇಮಠ ನೇತೃತ್ವದಲ್ಲಿ ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿ ಕುಂದಗೋಳ ತಾಲೂಕಿನಲ್ಲಿ ಸಹ ಕಾರ್ಮಿಕ ಕಚೇರಿ ಬಾಗಿಲು ತೆರೆದಿದೆ ಇದರ ಸದುಪಯೋಗ ಸೌಲಭ್ಯಗಳನ್ನು ಪಡೆಯಿರಿ ಎಂದರು.
ಈ ವೇಳೆ ತಹಶೀಲ್ದಾರ ನೇತೃತ್ವದಲ್ಲಿ ಕಾರ್ಮಿಕರ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಅಧಿಕಾರಿ ಗಿರೀಶ್ ಪಾಟೀಲ, ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತನಹಳ್ಳಿ, ಹುಬ್ಬಳ್ಳಿ ಕುಂದಗೋಳ ನಿರೀಕ್ಷಕಿ ರಜನಿ ಹಿರೇಮಠ, ಹಾಗೂ ತಹಶೀಲ್ದಾರ ಕಚೇರಿ ಸಿಬ್ಬಂದಿ ಕುಂದಗೋಳ ತಾಲೂಕಿನ ಕಾರ್ಮಿಕರು ಉಪಸ್ಥಿತರಿದ್ದರು.
Kshetra Samachara
17/08/2022 03:14 pm