ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಹನ್ನೆರಡು ವರ್ಷಗಳಿಂದ ಉದ್ಘಾಟನೆಗೆ ಕಾಯ್ದು ಕುಳಿತಿರುವ ಅಂಬೇಡ್ಕರ್ ಭವನ

ಕಲಘಟಗಿ: ಶಬರಿ ರಾಮನಿಗಾಗಿ ಕಾದು ಕುಳಿತ ಕಥೆ ಕೇಳಿದ್ದೇವೆ,ಆದರೆ ಪಟ್ಟಣದಲ್ಲಿರುವ ಅಂಬೇಡ್ಕರ್ ಭವನ ಮ್ಯಾಚಿಂಗ್ ಗ್ರ್ಯಾಂಟ್ ಗೆ ಕಾದು ಉದ್ಘಾಟನೆಗೂ‌ ಮುನ್ನವೇ ಪಾಳುಬಿದ್ದಿದೆ.

ಪಟ್ಟಣದ ಸರಕಾರಿ ಪ್ರೌಢ ಶಾಲೆಯ ಹಿಂದುಗಡೆ ಇರುವ ಅಂಬೇಡ್ಕರ್ ಭವನ ಕಳೆದ ಹನ್ನೆರಡು ವರ್ಷಗಳಿಂದ ಉದ್ಘಾಟನೆ ಮಾಡದೇ ಹಾಗೆ ಬಿಡಲಾಗಿದ್ದು,ಕಟ್ಟಡ ನಿರ್ವಹಣೆ ಇಲ್ಲದೆ‌ ಹಾಳಾಗುತ್ತಿದೆ.2008-09‌ ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕಟ್ಟಡ ಕಾಮಗಾರಿ ಮಾಡಲಾಗಿದೆ.ಆದರೆ ಮ್ಯಾಚಿಂಗ್ ಗ್ರ್ಯಾಂಟ್ ಕೊರತೆಯಿಂದ ಅಂಬೇಡ್ಕರ್ ಭವನ ಉದ್ಘಾಟನೆಗೆ ಕಾದುಕುಳಿತಿರುವುದು ವಿಪರ್ಯಾಸ.

ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡ ಕಾಮಗಾರಿ‌ ಪೂರ್ಣವಾಗಲು ಅನುದಾನ ಕಲ್ಪಿಸಿ‌ ಅಂಬೇಡ್ಕರ್ ಭವನವನ್ನು ಲೋಕಾರ್ಪಣೆ ಮಾಡ ಬೇಕಿದೆ.

Edited By : Manjunath H D
Kshetra Samachara

Kshetra Samachara

10/11/2020 01:15 pm

Cinque Terre

31.09 K

Cinque Terre

2

ಸಂಬಂಧಿತ ಸುದ್ದಿ