ಕುಂದಗೋಳ: ಪಬ್ಲಿಕ್ ನೆಕ್ಸ್ಟ್ ಪ್ರಕಟಿಸಿದ ವರದಿಯೊಂದು ರೈತ ಕುಲದ ಸಂಕಷ್ಟವನ್ನೇ ದೂರು ಮಾಡಿದೆ. ರೈತರ ಬೆಳೆಗಳಿಗೆ ಕಾಡುವ ರೋಗಗಳಿಗೆ ಪರಿಹಾರ, ಮಣ್ಣಿನ ಪರೀಕ್ಷೆ ಕೈಗೊಳ್ಳಲಾಗದೆ ಎರಡು ತಿಂಗಳು ಇಲಾಖೆ ಮುಂದೆ ಖಾಲಿ ಖಾಲಿ ನಿಂತಿದ್ದ ವಾಹನವನ್ನು ಓಡುವಂತೆ ಮಾಡಿದೆ.
ಹೌದು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯ ಕೃಷಿ ಸಂಜೀವಿನಿ ವಾಹನ ಕುಂದಗೋಳ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ತಲುಪಿದರೂ ತಾಂತ್ರಿಕ ಸಲಕರಣೆ, ಟೆಕ್ನಿಕಲ್ ಸಿಬ್ಬಂದಿ, ಡ್ರೈವರ್ ಇಲ್ಲದೆ ಇತ್ತ ಬಳಕೆಯೂ ಇಲ್ಲದೆ ನಿಂತಿತ್ತು.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿ ಬಿತ್ತರಿಸಿ ಸಂಬಂಧಪಟ್ಟ ಜಿಲ್ಲಾ ಕೃಷಿ ಅಧಿಕಾರಿಗಳ ಗಮನ ಸೆಳೆದಿತ್ತು. ಪಬ್ಲಿಕ್ ನೆಕ್ಸ್ಟ್ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಸದ್ಯ ಕೃಷಿ ಸಂಜೀವಿನಿ ವಾಹನಕ್ಕೆ ಟೆಕ್ನಿಕಲ್ ಸಿಬ್ಬಂದಿ, ಡ್ರೈವರ್ ಒದಗಿಸಿ ರೈತರಿಗೆ ಕೃಷಿ ಸಂಜೀವಿನಿ ವಾಹನದ ಉಪಯೋಗ ಲಭ್ಯವಾಗುವಂತೆ ಮಾಡಿದ್ದಾರೆ.
ಈಗಾಗಲೇ ಕುಂದಗೋಳ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಕೃಷಿ ಸಂಜೀವಿನಿ ವಾಹನ ಓಡಾಟ ನಡೆಸಿ ರೈತರಿಗೆ ಮಣ್ಣು ಪರೀಕ್ಷೆ, ಬೆಳೆಗಳ ರೋಗದ ಮಾಹಿತಿ ನೀಡುತ್ತಿದೆ.
ಒಟ್ಟಾರೆ ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ 9 ಲಕ್ಷಕ್ಕೂ ಅಧಿಕ ಹಣ ವ್ಯಯ ಮಾಡಿ ಖರೀದಿಸಿ ಉಪಯೋಗ ಇಲ್ಲದೆ ನಿಂತಿದ್ದ ಕೃಷಿ ಸಂಜೀವಿನಿ "ಲ್ಯಾಬ್ ಟು ಲ್ಯಾಂಡ್ ವಾಹನ" ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ತನ್ನ ಕೆಲಸ ಆರಂಭಿಸಿ ಅನ್ನದಾತನಿಗೆ ತನ್ನ ಸಮಗ್ರ ಸೇವೆ ನೀಡುತ್ತಿದೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/09/2022 07:37 pm