ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ತುಂಡು ಭೂಮಿಗೂ ಕೈ ಹಾಕಿದ ಸರ್ಕಾರ.. ಅನ್ನದಾತರ ಅಳಲು ಕೇಳೋರು ಯಾರು?

ಧಾರವಾಡ: ಅವು ಎರಡೂ ಚಿಕ್ಕ ಗ್ರಾಮಗಳು. ಈಗಾಗಲೇ ಆ ಗ್ರಾಮಗಳ ಸಾವಿರ ಎಕರೆ ಜಮೀನನ್ನು ಸರ್ಕಾರ ಬೇರೆ ಬೇರೆ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಂಡಿದೆ. ಈಗ ಮತ್ತೇ 537 ಎಕರೆ ಜಮೀನನ್ನು ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದೆ. ಹೀಗಾಗಿ ಈ ಬಾರಿ ನಾವು ನಮ್ಮ ಜಮೀನನ್ನು ಬಿಟ್ಟು ಕೊಡೋದಿಲ್ಲ ಎಂದು ಆ ಗ್ರಾಮದ ರೈತರು ಪಟ್ಟು ಹಿಡಿದಿದ್ದಾರೆ. ಹಾಗಿದ್ರೆ ಯಾವ ಊರು ಅದು ಅಂತೀರಾ? ಇಲ್ಲಿದೆ ನೋಡಿ ಡೀಟೆಲ್ಸ್.

ಇಲ್ಲಿ ನಿಂತಿರುವ ಇವರೆಲ್ಲ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಹಾಗೂ ಹಿರೇಮಲ್ಲಿಗವಾಡ ಗ್ರಾಮದ ರೈತರು. ಈ ಎರಡು ಚಿಕ್ಕ ಗ್ರಾಮದ ಜನರು ಇಷ್ಟು ದಿನ ಉಳುಮೆ ಮಾಡಿ ಜೀವನ ನಡೆಸುತ್ತ ಬಂದಿದ್ದರು. ಆದರೆ ಈಗ ಇವರೆಲ್ಲರ ಬಳಿ ಉಳಿದಿರುವುದು ಕೇವಲ ಒಂದು ಅಥವಾ ಎರಡು ಎಕರೆ ಜಮೀನು ಮಾತ್ರ. ಯಾಕಂದ್ರೆ ಈಗಾಗಲೇ ಈ ರೈತರಿಂದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸಾಕಷ್ಟು ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಅಲ್ಲದೇ ಆ ಜಮೀನಿನಲ್ಲಿ 500 ಎಕರೆಷ್ಟು ಐಐಟಿಗೆ ಹಾಗೂ 500 ಎಕರೆ ಕರ್ನಾಟಕ ಹೌಸಿಂಗ್ ಬೋರ್ಡ್‌ಗೆ ಕೊಡಲಾಗಿದೆ. ಹೀಗಾಗಿ ಇವರ ಬಳಿ ಕೇವಲ ತುಂಡು ಜಮೀನು ಮಾತ್ರ ಉಳಿದಿದೆ. ಸದ್ಯ ಮತ್ತೇ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಈ ಗ್ರಾಮದ 537 ಎಕರೆ ಜಮೀನನ್ನು ಮತ್ತೆ ವಶಕ್ಕೆ ಪಡೆಯಲು ಮುಂದಾಗಿದೆ. ಇದರಿಂದ ಭಯಗೊಂಡ ರೈತರಿಗೆ ದಿಕ್ಕು ತೋಚದಂತಾಗಿದೆ.

ಮತ್ತೊಂದು ಕಡೆ ಐಐಟಿಗೆ ಜಮೀನು ಪಡೆದ ನಂತರ ಈ ಜಮೀನು ಕಳೆದುಕೊಂಡವರ ಕುಟುಂಬಗಳಿಗೆ ಅಲ್ಲಿ ಕೆಲಸ ಕೊಡುವ ಭರವಸೆಯನ್ನು ಕೊಡಲಾಗಿತ್ತಂತೆ. ಆದರೆ, ಕೆಲಸ ಹೋಗಲಿ ಐಐಟಿ ಇರುವ ಜಮೀನಿನಲ್ಲಿ ನಮಗೆ ಕಾಲು ಇಡಲೂ ಕೊಡುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈಗ ಮತ್ತೆ ಸರ್ಕಾರ ಇವರ ಬಳಿ ಇರುವ ತುಂಡು ಭೂಮಿಯನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಇದಕ್ಕೆ ರೈತರು ಮಾತ್ರ ಭೂಮಿ ಕೊಡೋದಿಲ್ಲ ಎಂದು ಕಡಾ ಖಂಡಿತವಾಗಿ ಹೇಳಿದ್ದಾರೆ. ಮುಂದೆ ಈ ಬಗ್ಗೆ ಸರ್ಕಾರ ಏನು ನಿರ್ಣಯ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By :
Kshetra Samachara

Kshetra Samachara

11/08/2022 06:04 pm

Cinque Terre

65.05 K

Cinque Terre

3

ಸಂಬಂಧಿತ ಸುದ್ದಿ