ಹುಬ್ಬಳ್ಳಿ: ಅದು ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೇನೋ ನಿಜ. ಆದರೆ ಇದರಿಂದ ದೇಶದ ಅನ್ನದಾತನ ಬದುಕಿಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡುವ ಕಾರ್ಯಕ್ಕೆ ಮುಂದಾಗಿದೆ. ಪ್ರತಿಷ್ಠೆಗೆ ಮುಂದಾಗಿರುವ ಸರ್ಕಾರ ಅನ್ನದಾತನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..
ಧ್ವಜ ನೀತಿ ಸಂಹಿತೆಯನ್ನ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ ನೇರವಾಗಿ ರೈತರ ಬೆನ್ನಿಗೆ ಚೂರಿ ಹಾಕಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹುಚ್ಚು ನಿರ್ಧಾರಕ್ಕೆ ಈಗ ದೇಶದ ಅನ್ನದಾತ ಕಷ್ಟ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರದ ಹುಚ್ಚು ನಿರ್ಧಾರದಿಂದ ಒಂದು ಕಡೆ ಮುಚ್ಚುವ ಹಂತದಲ್ಲಿ ಕೈಮಗ್ಗಗಳು. ಇನ್ನೊಂದು ಕಡೆ ರೈತರ ಬೆಳೆದ ಹತ್ತಿಯನ್ನ ಖರೀದಿ ಮಾಡುವವರು ಯಾರು ಎಂಬುವಂತ ಪ್ರಶ್ನೆ ರೈತ ವಲಯದಲ್ಲಿ ಕೇಳಿ ಬರುತ್ತಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ಯಡಬಿಂಡಗಿ ತನದಿಂದ ದಿಕ್ಕು ದೋಚದಂತಾದ ಅನ್ನದಾತ ಹೇಗೆ ಜೀವನ ನಡೆಸಬೇಕು ಎಂದು ಕಣ್ಣೀರು ಹಾಕುವಂತಾಗಿದೆ. ಧಾರವಾಡ ಜಿಲ್ಲೆಯಲ್ಲಿಯೇ 56,319 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ 4.5 ಲಕ್ಷ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತದೆ. ಸಾವಿರಾರು ಟನ್‌ಗಳಷ್ಟು ಹತ್ತಿಯನ್ನ ಎಲ್ಲಿ ಮಾರಾಟ ಮಾಡಬೇಕೆನ್ನುವ ಚಿಂತನೆಯಲ್ಲಿ ಅನ್ನದಾತ ಇರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ.
ಇನ್ನೂ ರೈತರು ಬೆಳೆದ ಹತ್ತಿಯಿಂದ ಚರಕದಿಂದ ನೂಲು ತೆಗೆಯುತ್ತಾರೆ. ನೂಲಿನಿಂದ ಕೈಮಗ್ಗದಲ್ಲಿ ಬಟ್ಟೆಯ ರೂಪ ಕೊಡಲಾಗುತ್ತದೆ. ನಂತರ ಇದೇ ಬಟ್ಟೆಯಿಂದ ರಾಷ್ಟ್ರಧ್ವಜಗಳನ್ನ ಸಿದ್ದಪಡಿಸಿಲಾಗುತ್ತದೆ. ಈಗ ಎಲ್ಲಾ ಬಟ್ಟೆಗಳಿಂದ ಧ್ವಜ ತಯಾರಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೇ ಕೇಂದ್ರ ಸರ್ಕಾರ ಚೀನಾದಿಂದಲೂ ರಾಷ್ಟ್ರಧ್ವಜಗಳನ್ನ ಆಮದು ಮಾಡಿಕೊಳ್ಳುವ ಸಿದ್ದತೆ ನಡೆಸಿದೆ. ಇದರಿಂದಾಗಿಯೇ ಹುಬ್ಬಳ್ಳಿಯ ಬೆಂಗೇರಿಯ ಖಾದಿ ಧ್ವಜಗಳಿಗಿಲ್ಲ ಈ ವರ್ಷ ಡಿಮ್ಯಾಂಡ್ ಎಂಬುವಂತಾಗಿದ್ದು, ರಾಶಿ ರಾಶಿ ಧ್ವಜಗಳು ತಯಾರಿಕಾ ಘಟಕದಲ್ಲಿಯೇ ನಮ್ಮ ಕಣ್ಣಿಗೆ ಕಾಣಸಿಗುತ್ತಿವೆ. ಕೊಂಡುಕೊಳ್ಳುವವರೇ ಇಲ್ಲ ಎಂದರೆ ಧ್ವಜಗಳನ್ನ ಏಕೆ ತಯಾರಿಸಬೇಕು ಎಂಬ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಒಟ್ಟಿನಲ್ಲಿ ಧ್ವಜ ತಯಾರಿಕೆ ನಿಂತರೆ ಕೈಮಗ್ಗಗಳಿಗೆ ಬೀಗ ಜಡಿಯುವುದು ಗ್ಯಾರಂಟಿ. ಕೈಮಗ್ಗಗಳು ಕ್ಲೋಸ್ ಆದ್ರೆ ರೈತರ ಕಷ್ಟಪಟ್ಟು ಬೆಳೆದ ಹತ್ತಿಯನ್ನ ಖರೀದಿ ಮಾಡುವವರು ಯಾರು..? ಕೇಂದ್ರ ಸರ್ಕಾರ ಧ್ವಜ ನೀತಿಯನ್ನ ಬದಲಾಯಿಸಿ ಅನ್ನದಾತನ ಹೊಟ್ಟೆಯ ಮೇಲೆ ಹೊಡೆದಿದೆ. ಗಾಂಧೀಜಿಯವರ ಕಂಡ ಕನಸಿಗೆ ಎನ್‌ಡಿಎ ಸರ್ಕಾರ ದ್ರೋಹ ಬಗೆದಿದೆ. ಇನ್ನಾದ್ರೂ ನರೇಂದ್ರ ಮೋದಿಯವರು ಎಚ್ಚೆತ್ತುಕೊಂಡು ಖಾದಿಯಿಂದ ಸಿದ್ದವಾಗುವ ರಾಷ್ಟ್ರಧ್ವಜಗಳಿಗೆ ಮಾತ್ರ ಅವಕಾಶ ನೀಡಬೇಕು. ಹೊಸ ಧ್ವಜ ನೀತಿಯನ್ನು ತೆಗೆದುಹಾಕಿ ಅನ್ನದಾತನ ಬೆನ್ನಿಗೆ ನಿಲ್ಲಬೇಕು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/07/2022 07:21 pm