ವಿನೋದ ಇಚ್ಚಂಗಿ: ಪಬ್ಲಿಕ್ ನೆಕ್ಸ್ಟ್ ನವಲಗುಂದ...
ನವಲಗುಂದ : ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ರೈತರ ಪರಿಸ್ಥಿತಿ ಹೇಳತೀರದ್ದಾಗಿದೆ. ಹೌದು ಸಾಲ ಸೂಲ ಮಾಡಿ ಬೆಳೆದ ಬೆಳೆ ಈ ಬಾರಿಯ ಮಳೆಗೆ ಕೊಚ್ಚಿ ಹೋಗಿದ್ದು, ರೈತ ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವಂತಾಗಿದೆ.
ಈ ಬಾರಿಯ ಮಳೆಯಿಂದಾಗಿ ತುಪ್ಪರಿ ಹಳ್ಳ ತುಂಬಿ ಹರಿದ ಹಿನ್ನಲೆ ಶಿರಕೋಳದ ಸುಮಾರು 400 ಕ್ಕಿಂತ ಹೆಚ್ಚು ಜಮೀನು ಪ್ರವಾಕ್ಕೆ ತುತ್ತಾದರೆ, ಹಣಸಿಯ 700 ಎಕ್ಕರೆ ಜಮೀನಿಗೆ ನೀರು ನುಗ್ಗಿತ್ತು. ಅಷ್ಟೇ ಅಲ್ಲದೆ ಇವೆರಡು ಊರಿಗೆ ಸಂಪರ್ಕ ಕಲ್ಪಿಸಿಕೊಡುವ ಸೇತುವೆಯು ಸಹ ಕೊಚ್ಚಿ ಹೋಗಿತ್ತು, ಇದೆಲ್ಲ ನಡೆದು ಹೆಚ್ಚು ಕಡಿಮೆ 3 ತಿಂಗಳು ಕಳೆದರು ಇದುವರೆಗೂ ಸೇತುವೆಯ ಕಾಮಗಾರಿಯೂ ಆಗಲಿ ರೈತರಿಗೆ ಪರಿಹಾರವೂ ದೊರೆತಿಲ್ಲಾ, ಈ ಬಗ್ಗೆ ಗ್ರಾಮದ ರೈತ ಶಂಕರ್ ಗೌಡ ಪಾಟೀಲ್ ತಮ್ಮ ಅಳಲನ್ನು ಈ ರೀತಿ ತೋಡಿಕೊಂಡರು...
ಈಗ ಈ ರಸ್ತೆಯು ಸಹ ಸಂಪೂರ್ಣ ಹಾಳಾಗಿದ್ದು ಗ್ರಾಮಸ್ತರು ಬೇಸತ್ತು ಹೋಗಿದ್ದಾರೆ. ಇನ್ನೂ ಸೇತುವೆಯ ಮರು ನಿರ್ಮಾಣ ಆಗಬೇಕು ಮತ್ತು ಮಳೆಯಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂಬುದು ಗ್ರಾಮಸ್ತರ ಅಳಲಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಶಾಸಕರು ಒಮ್ಮೆ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಳಲಿಗೆ ಸ್ಪಂದಿಸುವಂತ ಕೆಲಸ ಮಾಡಬೇಕಿದೆ...
Kshetra Samachara
04/11/2020 07:46 pm