ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳ್ಯಾಗ ಜಲಪಾತ ಆಗೈತಿ ಚರಂಡಿ ಅವ್ಯವಸ್ಥೆ: ಸಾರ್ವಜನಿಕ ಜಂಜಾಟ ನೋಡ್ರಿ

ಹುಬ್ಬಳ್ಳಿ: ನಮಸ್ಕಾರ ರೀ ಹುಬ್ಬಳ್ಳಿ ಮಂದಿ...ನಿಮಗೂ ಮನೆಯಲ್ಲಿ ಕುಂತ ಕುಂತು ಬೇಜಾರ ಆಗಿದೇ ಅಲ್ವ..ಹಂಗಾದರೇ ಹುಬ್ಬಳ್ಳ್ಯಾಗ ಒಂದು ಜಲಪಾತ ಐತಿ ನೋಡಿಕೊಂಡು ಬರೋಣ ಬರ್ರಿ...

ಅರೇ...ಇದೇನ್ರೀ ಜಲಪಾತ ಅಂತ ಹೇಳಿ ಕೊಳಚೆ ಗುಂಡಿಗೆ ಕರಕೊಂಡ ಬಂದ್ರೀ ಅಂತಾ ಕೇಳ್ತಿರಿ ಅಲ್ಲ.. ಇದೇ ನೋಡ್ರಿ ನಮ್ಮ ಹುಬ್ಬಳ್ಳ್ಯಾಗ ಇರುವ ಜಲಪಾತ ಇಂತಹ ಸುಮಾರು ಅವ್ಯವಸ್ಥೆ ಗುಂಡಿಗಳು ಹುಬ್ಬಳ್ಳಿ ಒಳಗೆ ಸಿಗ್ತಾವು ನೋಡ್ರಿ.. ಹುಬ್ಬಳ್ಳಿ ಕೇಶ್ವಾಪೂರದ ಶಿವಗಂಗಾ ಲೇಔಟ್ ಒಳಗೆ ಸುಮಾರು ದಿನದಿಂದ ಡ್ರೈನೇಜ್ ಸಮಸ್ಯೆ ತಲೆಯೆತ್ತಿದ್ದರೂ ಯಾವ ಅಧಿಕಾರಿಗಳು ಇತ್ತಾಗ ಕಣ್ಣು ಹಾಯಿಸ್ತಿಲ್ಲ ನೋಡ್ರಿ..

ವ್ಯವಸ್ಥಿತ ಚರಂಡಿ ವ್ಯವಸ್ಥೆ ಇಲ್ಲದೇ ಇಲ್ಲಿ ಚರಂಡಿಯ ಕೊಳಚೆ ನೀರು ಮನೆ ಬಾಗಿಲ ಮುಂದೆ ನುಗ್ಗುತ್ತಿದ್ದಾವು. ಕೇಶ್ವಾಪೂರದ ಮೆನ್ ರೋಡಿನ್ಯಾಗ ಇರುವ ಈ ರಸ್ತೆ ಮ್ಯಾಲೇ ಇಂತಹದೊಂದು ಅವ್ಯವಸ್ಥೆ ತಲೆದೂರಿದರೂ ಯಾರೊಬ್ಬರೂ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿಲ್ಲ.ಮೊನ್ನೆ ಜೋಶಿ ಸಾಹೇಬರು,ಶೆಟ್ಟರ್ ಸಾಹೇಬ್ರು ಇಲ್ಲೇ ಹಾದು ಹೋಗ್ಯಾರ ಅವರು ನೋಡಿಲ್ಲ...ಅರೇ ಪಾಪಾ ಅವರು ಎಸಿ ಕಾರ ಒಳಗೆ ಕುತಕೊಂಡು ಹೊಗ್ತಾರೆ ಅವರಿಗೆಲ್ಲ ಇವೆಲ್ಲ ಎಲ್ಲ ಕಾಣಬೇಕು ಅಂತೀರಿ ಅಲ್ವ...ಅದು ಕರೆನ ಇದೇ ಬಿಡ್ರೀ..ಈ ಸಮಸ್ಯೆ ಕುರಿತು ಇಲ್ಲೊಬ್ಬ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಾರ ಅವರು ಏನ ಅಂತಾರ ಅದನ್ನು ಕೇಳಿಯೇ ಬಿಡೋಣ ಬನ್ನಿ...

ಅರೇ...ಪಾಪಾ ನೋಡ್ರಿ ಇಷ್ಟು ಸಮಸ್ಯೆ ಇದ್ದರೂ ಕೂಡ ಸುಮ್ಮನೆ ಜೀವನ ನಡೆಸ್ತಿದ್ದಾರೆ.ಈ ಬಗ್ಗೆ ಅವರು ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದರಂತೆ..ಆದರೂ ಏನು ಉಪಯೋಗ ಇಲ್ಲ ಅಂತಾರ ಹಂಗಾದ್ರೇ ನಾವು ಒಂದು ಮಾತು ಕಮೀಷನರ್ ಸಾಹೇಬರನ್ನ ಕೇಳೋಣ ಬರ್ರೀ...

ನೋಡ್ರಿ.... ಪಾಲಿಕೆ ಆಯುಕ್ತರು ಕೆಲಸ ಮಾಡ್ತಿವಿ ಅಂತಾರ ಕರೆ ಆದ್ರ ಬೇಗ ಬೇಗ ಮಾಡಿ ಸಾರ್ವಜನಿಕರ ಸಮಸ್ಯೆ ಒಂದು ಪರಿಹಾರ ಕೊಡ್ರಿ..ಸರ್ ಪ್ಲೀಸ್...

Edited By : Manjunath H D
Kshetra Samachara

Kshetra Samachara

02/11/2020 06:55 pm

Cinque Terre

38.99 K

Cinque Terre

9

ಸಂಬಂಧಿತ ಸುದ್ದಿ