ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರೊಟ್ಟಿ ತಿನ್ನೋ ಹಳ್ಳದ ನೀರು ನಿಮ್ಮ ಜೀವ ತೆಗದಿತು ಹುಷಾರ್ !

ಕುಂದಗೋಳ : ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಗಿರಿಯಾಲ, ಕಟ್ನೂರು, ಮಾವನೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ವಾಹನ ಸವಾರರು ಮಳೆಗಾಲದಲ್ಲಿ ಸಂಚರಿಸಬೇಕಾದ್ರೇ ಜೀವ ಪಣಕ್ಕಿಟ್ಟೇ ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸ್ವಲ್ಪ ಯಾಮಾರಿದ್ರೂ ನೀರಿನ ಸೆಳವಿಗೆ ಕೊಚ್ಚಿ ಹೋಗೋದು ಗ್ಯಾರಂಟಿ.

ಇದೋ ಹೀಗೆ ಮಳೆ ನಿಂತ್ರೂ ರಸ್ತೆ ತುಂಬಿಕೊಂಡು ವಾಹನಗಳಿಗೆ ಅಡ್ಡವಾಗಿ ಹರಿಯುತ್ತಿರುವ ರೊಟ್ಟಿ ತಿನ್ನೋ ಹಳ್ಳ ರಭಸದ ಮಳೆ ಸುರಿದಾಗೊಮ್ಮೆವಾಹನ ಸವಾರರಿಗೆ ಈ ಸಂಕಟ ತೊಂದೊಡ್ಡಿ ಬಿಡುತ್ತೆ ,ಈ ಪರಿಸ್ಥಿತಿಯನ್ನ ಮೂರು ಊರಿನ ಗ್ರಾಮಸ್ಥರು ಯಾವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದ್ರೂ ಇಂದಿಗೂ ಪ್ರಯೋಜನ ಕಂಡಿಲ್ಲ.

Edited By : Manjunath H D
Kshetra Samachara

Kshetra Samachara

21/10/2020 04:34 pm

Cinque Terre

40.15 K

Cinque Terre

1

ಸಂಬಂಧಿತ ಸುದ್ದಿ