ಕುಂದಗೋಳ : ಈ ಅತಿವೃಷ್ಟಿ ಹೊಡೆತ ಮತ್ತು ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಸಿಕ್ಕು ಅವ್ಯವಸ್ಥೆ ಹಾದಿ ತಲುಪಿದ ರಸ್ತೆಗಳು ಒಂದಾ ಎರೆಡಾ..ಹೇಳ್ತಾ ಹೋದಂತೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ ನೋಡಿ ಆ ಸಾಲಿಗೆ ಈ ಶರೇವಾಡ ಗ್ರಾಮದಿಂದ ಬೆಟದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಹೊರತಾಗಿಲ್ಲ.
ಇಲ್ನೋಡಿ ಈ ಗುಂಡಿಗಳ ಮಧ್ಯೆ ನಮಗೆ ರಸ್ತೆ ಕಾಣೋದೆ ಇಲ್ಲಾ ಅಷ್ಟರಮಟ್ಟಿಗೆ ರಸ್ತೆ ಹಾಳಾಗಿ ಗುಂಡಿಗಳು ಮಾರ್ಪಟ್ಟು ವಾಹನ ಸವಾರರ ಪ್ರಾಣಕ್ಕೆ ಬಾಯ್ತೆರೆದಿವೆ. ಶರೇವಾಡದ ಗ್ರಾಮಸ್ಥರಷ್ಟೇ ಅಲ್ಲಾ ಸುತ್ತ ಹತ್ತು ಹದಿನೈದು ಹಳ್ಳಿಗಳ ಜನರು ಇದೇ ರಸ್ತೆಲೀ ಸಂಚಾರ ಮಾಡಿ ಹುಬ್ಬಳ್ಳಿ ತಲುಪುತ್ತಾರೆ ಆದ್ರೂ ಈ ರಸ್ತೆ ಅಭಿವೃದ್ಧಿ ಕಂಡಿಲ್ಲ.
ಶರೇವಾಡ ಬಸ್ ನಿಲ್ದಾಣದದಿಂದ ಬರೋಬ್ಬರಿ 2 ಕಿಲೋ ಮೀಟರ್ ರಸ್ತೆ ಈ ದುಸ್ಥಿತಿ ಹಂತ ತಲುಪಿದೆ ಈ ರಸ್ತೆಲೀ ಗರ್ಭಿಣಿ, ವಯೋವೃದ್ಧರು ಸಂಚರಿಸಿದ್ರೇ ಅವ್ರ ಸ್ಥಿತಿ ದೇವ್ರಿಗೆ ಗೊತ್ತು ಬಿಡಿ ಇಂತಹ ಅವ್ಯವಸ್ಥೆ ಹೊಂದಿರುವ ರಸ್ತೆ ಮೇಲೆ ಈ ಅಧಿಕಾರಿ ವರ್ಗದವರು ಸಂಚಾರ ಮಾಡಿ ನಂತರ ರಸ್ತೆ ದುರಸ್ತಿ ಮಾಡ್ಸಿ ಎಂಬ ಜನರ ಕೂಗಿಗೆ ಇನ್ನಾದ್ರೂ ಅಧಿಕಾರಿಗಳು ಸ್ಪಂದಿಸಬೇಕಿದೆ.
Kshetra Samachara
12/10/2020 06:16 pm