ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬಡತನದಲ್ಲಿ ಅರಳಿದ ಪ್ರತಿಭೆಯ ಮೆಟ್ರಿಕ್ ಫಲಿತಾಂಶ 92%

ಕುಂದಗೋಳ : ಬಡತನದ ಬೇಗೆಯಲ್ಲಿ ನಿತ್ಯವೂ ಬೇಯುತ್ತಿದ್ದ ಕುಟುಂಬದ ಕುಡಿಯೊಂದು ಶಾಲಾ ರಜಾ ದಿನಗಳಲ್ಲಿ ಕೂಲಿ ನಾಲಿ ಮಾಡುತ್ತಾ, ಅಭ್ಯಾಸ ಮಾಡಿ ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.92 ಪ್ರತಿಶತಗಳಿಸಿ ತಂದೆ ತಾಯಿಗೆ ಕೀರ್ತಿ ತಂದಿದ್ದಾಳೆ.

ಹೌದು ! ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ರೋಷನಬಿ ಮಾಬುಸಾಬ ಮೆಣಸಿನಕಾಯಿ ಎಂಬ ಯುವತಿಯೇ ತನ್ನ ಬಡತನದ ಬದುಕಿನಲ್ಲೂ 92% ಅಂಕ ಗಳಿಸಿದವಳು.

ಸಂಶಿ ಗ್ರಾಮದ ನೀಲಮ್ಮ ಚ ಅಕ್ಕಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಓದಿದ ಈ ಯುವತಿ ಇಂತಹ ಸಾಧನೆ ಮಾಡಿದ್ದು, ಯುವತಿ ತಂದೆ ಕಟ್ಟಡ ಕಾರ್ಮಿಕರಾಗಿದ್ದು ತಾಯಿ ಕೂಲಿ ಕೆಲಸ ಮಾಡಿ ಮಗಳಿಗೆ ಶಿಕ್ಷಣ ಕೊಡಿಸಿದ್ದಕ್ಕೆ ಮಗಳು ಇಂದು ಉತ್ತಮ ಕೊಡುಗೆ ನೀಡಿದ್ದಾಳೆ.

ಕಿರಿದಾದ ಮನೆಯಲ್ಲೇ ಸಿಕ್ಕಷ್ಟು ಕಡಿಮೆ ಸೌಕರ್ಯಗಳಲ್ಲೇ ಓದಿ ರೋಷನಬಿ 92% ಪ್ರತಿಶತ ಗಳಿಸಿದ್ದು, ಕುಟುಂಬದಲ್ಲಿ ಸಂತಸ ತಂದಿದೆ.

ಆದ್ರೇ, ಬಡತನದಲ್ಲಿ ನಾಲ್ಕು ಮಕ್ಕಳನ್ನು ಕಟ್ಟಿಕೊಂಡು ಸಂಸಾರ ನೌಕೆ ಸಾಗಿಸಬೇಕಾದ ತಂದೆ ಮಾಬುಸಾಬನಿಗೆ ಆರ್ಥಿಕ ಪರಿಸ್ಥಿತಿ ಕಷ್ಟ ತಂದಿದ್ದು ಮಗಳಿಗೆ ಹೆಚ್ಚಿನ ಶಿಕ್ಷಣ ಕೊಡಿಸಲು ಶಕ್ತಿ ಹೊಂದಿಲ್ಲ, ರೋಷನಬಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಇಚ್ಚಿಸುವವರು.

ಈ ಮೊಬೈಲ್ ಸಂಖ್ಯೆ 9743710314 ಕರೆ ಮಾಡಬಹುದು.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/05/2022 09:47 pm

Cinque Terre

189.77 K

Cinque Terre

43

ಸಂಬಂಧಿತ ಸುದ್ದಿ