ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
ಕುಂದಗೋಳ : ಅವ್ಯವಸ್ಥೆಗಳ ಸುಳಿಗೆ ಸಿಲುಕಿ ಅವಾಸನದ ಅಂಚಿನಲ್ಲಿದ್ದ ಕಾಲೇಜು ಕಟ್ಟಡವೀಗ ಬಣ್ಣದಲಿ ಮಿಂದಿದ್ದು ಮಕ್ಕಳ ಆಗಮನಕ್ಕೆ ಕಾಯ್ತಾ ಇದೆ, ಕಪೌಂಡ್ ಇಲ್ಲದ ಕಾಲೇಜು ಆವರಣಕ್ಕೆ ನೂತನ ಕಾಂಪೌಂಡ್ ನಿರ್ಮಾಣವಾಗಿ, ಹೊಸ ಕಿಟಕಿ ಬಾಗಿಲು ಸೇರಿ ಅನೈರ್ಮಲ್ಯದ ಕಸ ಮಾಯವಾಗಿ ಹೊಸ ಕಳೆ ತಳೆದು ಫರ್ನಿಚರ್ ವರ್ಕ್ ಕಾರ್ಯಾರಂಭವಾಗಿದೆ.
ಹೌದು ! ಕಳೆದ 2009 ರಲ್ಲಿ ಕುಂದಗೋಳ ಪಟ್ಟಣದಲ್ಲಿ ನಿರ್ಮಾಣವಾದ ಸ್ವತಂತ್ರ ಪದವಿಪೂರ್ವ ಕಲಾ ಹಾಗೂ ವಾಣಿಜ್ಯ ಕಾಲೇಜಿನ ಕಟ್ಟಡ ದುಸ್ಥಿತಿ ಮತ್ತು ಮುರಿದು ಹೋದ ಕಿಟಕಿ, ಒಡೆದ ಗ್ಲಾಸ್ ಬಾಗಿಲು ಸ್ಥಿತಿ ಗಮನಿಸಿದ ನಿಮ್ಮ 12 ವರ್ಷವಾದ್ರೂ ಅಭಿವೃದ್ಧಿ ಕಾಣದ ಹಳೇ ಕಾಲೇಜು ಕಟ್ಟಡ ವಿದ್ಯಾರ್ಥಿಗಳ ಪಾಡೇನು ? ಎಂಬ ಶಿರ್ಷಿಕೆ ಅಡಿಯಲ್ಲಿ ಸುದ್ಧಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು.
ಈ ಪ್ರಕಟಗೊಂಡ ಬೆನ್ನಲ್ಲೇ ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸರ್ಕಾರಿ ಕಾಲೇಜು ಕಟ್ಟಡಕ್ಕೆ ಮಂಜುನಾಥ, ಸ್ಥಳೀಯರುಅಭಿವೃದ್ಧಿ ಮಂತ್ರ ಹೇಳಿ ಈಗಾಗಲೇ ಕಾಮಗಾರಿಯನ್ನು ಮುಕ್ತಾಯದ ಹಂತಕ್ಕೆ ತಂದಿದ್ದಾರೆ.
ವಿಶೇಷವಾಗಿ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಚಾರ್ಯರು ಸಹ ಪಬ್ಲಿಕ್ ನೆಕ್ಸ್ಟ್'ಗೆ ಸಂದೇಶ ಕಳುಹಿಸಿ ಕಟ್ಟಡ ಅಭಿವೃದ್ಧಿ ಕಂಡು ಖುಷಿಯಾಗಿ ಧನ್ಯವಾದ ತಿಳಿಸಿ ನಮ್ಮ ವರದಿಗಾರಿಕೆ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Kshetra Samachara
04/08/2021 07:48 pm