ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಶಾಲೆಯ ಸಮಸ್ಯೆಗೆ ಕೂಡಲೆ ಸ್ಪಂದಿಸಿದ ಪಟ್ಟಣ ಪಂಚಾಯತ್ ಅಧಿಕಾರಿ!

ಪಟ್ಟಣದ ಬಸವೇಶ್ವರ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಬಗ್ಗೆ ನಿನ್ನೆ ನಮ್ಮ ಪಬ್ಲಿಕ್ ನೆಕ್ಸ್ಟ್ ನಲ್ಲಿ ವರದಿ ಮಾಡಲಾಗಿತ್ತು.

ವರದಿಗೆ ಸ್ಪಂದಿಸಿದ ಇಲ್ಲಿಯ ಪಟ್ಟಣ ಪಂಚಾಯತ್ ಅಧಿಕಾರಿ ವೈ.ಜಿ.ಗದ್ದಿಗೌಡರ ಇಂದು ಮುಂಜಾನೆ ಅವರ ಸಿಬ್ಬಂದಿಗಳನ್ನು ಕಳುಹಿಸಿ ಶಾಲೆಯ ಆವರಣದಲ್ಲಿ ಇರುವ ಗಿಡಗಳು,ಕಸದ ರಾಶಿ ತೆಗೆದು ಸ್ವಚ್ಛತೆ ಮಾಡಿಸಿದ್ದು ಶೀಘ್ರದಲ್ಲಿ ಇಲ್ಲಿ ಕಾಂಪೌಂಡ್ ವ್ಯವಸ್ಥೆ ಕೂಡ ಮಾಡುವುದಾಗಿ ತಿಳಿಸಿದ್ದಾರೆ.

ಏನೆ ಆಗಲಿ ಎಲ್ಲಾ ಶಾಲೆಯ ಅವ್ಯವಸ್ಥೆಯ ಬಗ್ಗೆ ಅಲ್ಲಿರುವ ಅಧಿಕಾರಿಗಳು ಇದೇ ರೀತಿ ಸ್ಪಂದಿಸಿದರೆ, ಮಕ್ಕಳ ಕಲಿಕೆಗೆ ಅನುಕೂಲ ವಾಗುವುದಂತು ಅಷ್ಟೇ ಸತ್ಯ.

ವರದಿ: ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಬಿಗ್ ಇನ್ಪ್ಯಾಕ್ಟ್

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/07/2022 12:00 pm

Cinque Terre

57.92 K

Cinque Terre

1

ಸಂಬಂಧಿತ ಸುದ್ದಿ