ಧಾರವಾಡ: ಚಿಮಣಿ ತನ್ನ ಸುತ್ತಲೂ ಬೆಳಕು ನೀಡಿ, ತನ್ನ ಬುಡದಲ್ಲೇ ಕತ್ತಲು ಇಟ್ಟುಕೊಂಡಿರುತ್ತದೆ. ಆದರೆ, ಆಳುವ ವರ್ಗ ತನ್ನ ಬುಡವನ್ನೂ ಕತ್ತಲಾಗಿಸಿಕೊಂಡು ಸುತ್ತಲಿನ ಪ್ರದೇಶವನ್ನೂ ಕತ್ತಲಾಗಿಸಿಕೊಂಡಿರುವುದಕ್ಕೆ ತಾಜಾ ಉದಾಹರಣೆ ಧಾರವಾಡದ ಜಿಲ್ಲಾ ಪಂಚಾಯ್ತಿ.
ಮಳೆಗಾಲ ಇರುವುದರಿಂದ ಎಲ್ಲ ಹಳ್ಳಿಗಳ ರಸ್ತೆಗಳ ಸ್ಥಿತಿ ಅಧೋಗತಿಗೆ ತಲುಪಿದೆ. ರಸ್ತೆ ಮಾಡಸ್ರಿ ಅಂದ್ರೆ ಮಳೆಗಾಲ ಮುಗೀಲಿ ಎನ್ನುವ ಉತ್ತರ ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಜಿಲ್ಲಾ ಪಂಚಾಯ್ತಿ ಕೂಡ ಮಳೆಗಾಲ ಮುಗಿದ ಮೇಲೆ ತನ್ನ ಆವರಣವನ್ನು ಡಾಂಬರೀಕರಣ ಮಾಡಿದರಾಯ್ತು ಎಂದು ಬಿಟ್ಟಿದೆಯೇನೋ ಎಂಬಂತೆ ಕಾಣುತ್ತಿದೆ.
ಹೌದು! ನೀವು ನೋಡುತ್ತಿರುವ ರಸ್ತೆ ಬೇರೆ ಯಾವುದೋ ಅಲ್ಲ ಜಿಲ್ಲಾ ಪಂಚಾಯ್ತಿಯ ಮುಖ್ಯ ಪ್ರವೇಶ ರಸ್ತೆ. ಈ ರಸ್ತೆಯ ಪರಿಸ್ಥಿತಿಯೇ ಹೀಗೆ ಇರುವಾಗ ಇನ್ನು ಹಳ್ಳಿಗಳ ರಸ್ತೆಗಳು ಯಾವ ಹಂತ ತಲುಪಿರಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ.
ಸಣ್ಣ ಪುಟ್ಟ ರಸ್ತೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಪಂಚಾಯ್ತಿ ಬಳಿಯೇ ಅನುದಾನ ಇರುತ್ತದೆ. ಆದರೆ, ಜಿಲ್ಲಾ ಪಂಚಾಯ್ತಿಗೆ ತನ್ನ ಮುಂದಿನ ಆವರಣವನ್ನೂ ರಿಪೇರಿ ಮಾಡಿಕೊಳ್ಳುವಷ್ಟು ಅನುದಾನ ಇಲ್ಲದೇ ಇರುವುದನ್ನು ಈ ರಸ್ತೆ ತೋರಿಸುತ್ತಿದೆ.
Kshetra Samachara
22/09/2020 06:38 pm