ನವಲಗುಂದ: ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದ ಶರಣಬಸವೇಶ್ವರ ಓಣಿ (ಜನತಾ ಪ್ಲಾಟ ) ರಸ್ತೆ ಹದಗೆಟ್ಟು ಹೋಗಿದೆ. ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ತಹಶೀಲ್ದಾರ್ ಅನಿಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.
ಯಮನೂರು ಗ್ರಾಮದ ತಿರ್ಲಾಪೂರ ರಸ್ತೆಗೆ ಹೊಂದಿರುವ ಶರಣಬಸವೇಶ್ವರ ಓಣಿ (ಜನತಾ ಪ್ಲಾಟ ) ಯಲ್ಲಿ ಮಳೆಯಿಂದಾಗಿ ನೀರು ಮನೆಯೊಳಗೆ ನುಗ್ಗಿ, ಚರಂಡಿಯ ನೀರು ಕುಡಿಯುವ ನೀರಿಗೆ ಮಿಶ್ರಣಗೊಂಡಿದೆ. ಕಾರಣ ನಿರಂತರವಾಗಿ ಎರಡು ವರ್ಷಗಳ ಕಾಲ ಗ್ರಾಮ ಪಂಚಾಯ್ತಿಗೆ ಹಾಗೂ ತಾಲೂಕು ಪಂಚಾಯತಿಗೆ ಮನವಿ ನೀಡಿದರೂ ಸಹ ಪ್ರಯೋಜನವಾಗಿಲ್ಲ.
ಇನ್ನು ರಸ್ತೆಯಂತೂ ಸಂಪೂರ್ಣ ಹದಗೆಟ್ಟು ವೃದ್ಧರು, ಮಹಿಳೆಯರು, ರೈತರು, ಮಕ್ಕಳು ಸಂಚಾರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ದುರಸ್ಥಿ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೇಖಸಲಾಗಿದೆ.
Kshetra Samachara
02/10/2022 12:51 pm