ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜೆಎಸ್‌ಡಬ್ಲು ಕಂಪೆನಿಯಿಂದ ಹೊಸ ಮಾದರಿ ಮರಳು ಮಾರುಕಟ್ಟೆಗೆ

ಧಾರವಾಡ: ಜೆಎಸ್‌ಡಬ್ಲು ಸಿಮೆಂಟ್ ಕಂಪೆನಿ ಬ್ರಾಂಡೆಡ್ ಮರಳು ಚೀಲವನ್ನು ಮಾರುಕಟ್ಟೆಗೆ ಬುಧವಾರ ಬಿಡುಗಡೆ ಮಾಡಿತು.

ಕಂಪೆನಿ ನೇರ ಮಾರುಕಟ್ಟೆ ಸಹ ಉಪಾಧ್ಯಕ್ಷ ಡಾ.ಎಲ್.ಆರ್. ಮಂಜುನಾಥ ಮಾತನಾಡಿ, ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಗುಣಮಟ್ಟದ ಮರಳು ದೊರೆಯುವುದು ಕಷ್ಟವಾಗಿದೆ. ಈ ಕೊರತೆ ನೀಗಿಸಲು ಸ್ಲಾಗ್ ಮರಳು ಸಿದ್ಧಪಡಿಸಲಾಗಿದೆ. ಈ ಸ್ಲಾಗ್ ಬಳಸಿ ಈಗಾಗಲೇ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಸಮಸ್ಯೆ ಕಾಣಿಸಿಲ್ಲ ಎಂದು ಹೇಳಿದರು.

ಸ್ಲಾಗ್ ಉಕ್ಕು ಉತ್ಪಾದನೆಯಲ್ಲಿ ಹೊರ ಹೊಮ್ಮುವ ಒಂದು ಉಪ ಉತ್ಪನ್ನ ಇದಾಗಿದೆ. ಉಕ್ಕು ಉತ್ಪಾದನೆಯಲ್ಲಿ ಅದಿರನ್ನು 1,500 ಡಿಗ್ರಿ ಶಾಖದಲ್ಲಿ ಕಾಯಿಸಿದಾಗ ಸ್ಲಾಗ್ ಬೇರ್ಪಡುತ್ತದೆ. ಹೀಗೆ ಬೇರ್ಪಟ್ಟ ಸ್ಲಾಗ್ ನೈಸರ್ಗಿಕವಾಗಿ ದೊರೆಯುವ ಮರಳಿಗಿಂತ ಶುದ್ಧವಾಗಿರುತ್ತದೆ. ಈ ಮರಳು ಗುಣಮಟ್ಟ ಮತ್ತು ಬಾಳಿಕೆ ಬರುವಂತದ್ದಾಗಿದೆ ಎಂದರು.

ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಧ್ಯಕ್ಷ ಸುನೀಲ ಬಾಗೇವಾಡಿ ಮಾತನಾಡಿ, ಕೃತಕ ಮರಳಿನಿಂದ ಪರಿಸರ ರಕ್ಷಣೆ ಜತೆಗೆ ನೀರಿನ ಮೂಲಗಳನ್ನು ರಕ್ಷಿಸಬಹುದು. ಸ್ಲಾಗ್ ಬಳಕೆ ಈಗಾಗಲೇ ಆರಂಭವಾಗಿದ್ದು, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಆರಂಭವಾಗಲಿದೆ. ಮರಳಿನ ಅಭಾವದಿಂದ ಈ ಸ್ಲಾಗ್ ಬಳಕೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ಹೇಳಿದರು.

ಅರುಣಕುಮಾರ ಶೀಲವಂತ, ಶ್ರೀನಿವಾಸ ಕುಲಕರ್ಣಿ, ವಿನಾಯಕ ನಾಯಕ, ಸಿದ್ದನಗೌಡ ಪಾಟೀಲ, ಎಸ್. ಅಭಿಷೇಕ ಇದ್ದರು.

Edited By : Nagesh Gaonkar
Kshetra Samachara

Kshetra Samachara

21/01/2021 12:06 pm

Cinque Terre

22.75 K

Cinque Terre

1

ಸಂಬಂಧಿತ ಸುದ್ದಿ