ಧಾರವಾಡ: ರಾಜಸ್ಥಾನದಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಧಾರವಾಡದಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ, ಬಿಜೆಪಿ ಸೇರಿದಂತೆ ಇತರೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಧಾರವಾಡದ ವಿವೇಕಾನಂದ ವೃತ್ತದಲ್ಲಿ ಜಮಾವಣೆಗೊಂಡ ಎಲ್ಲ ಕಾರ್ಯಕರ್ತರು ಬಹಿರಂಗ ಸಮಾವೇಶ ನಡೆಸಿ, ಹಂತಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಪುಟಾಣಿ ಮಕ್ಕಳೂ ಸಹ ಪಾಲ್ಗೊಂಡು ನಾನು ಕನ್ಹಯ್ಯ ಲಾಲ್ ಎಂಬ ಪೋಸ್ಟರ್ ಹಿಡಿದು ಗಮನ ಸೆಳೆದರು.
ಸಮಾವೇಶದುದ್ದಕ್ಕೂ ಭಯೋತ್ಪಾದಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಕನ್ಹಯ್ಯ ಅವರನ್ನು ಹತ್ಯೆ ಮಾಡಿದ ಹಂತಕರನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿದರು.
ರಾಷ್ಟ್ರದಾದ್ಯಂತ ಬಜರಂಗದಳ ಪ್ರತಿಭಟನೆಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಧಾರವಾಡದಲ್ಲೂ ಈ ಪ್ರತಿಭಟನೆ ನಡೆಸಲಾಯಿತು, ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತ
Kshetra Samachara
30/06/2022 02:56 pm