ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ಚರಕ ಸ್ಥಾಪನೆ

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ‘ಸಮೃದ್ಧ ಭಾರತ’ ಘೋಷವಾಕ್ಯದೊಂದಿಗೆ ಮೂರು ಅಡಿ ಎತ್ತರದಲ್ಲಿ ಚರಕ ಪ್ರತಿಷ್ಠಾಪಿಸಲಾಗಿದೆ.

ಚರಕದಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ‘ಮೈ ಲೈಫ್‌ ಈಸ್‌ ಮೈ ಮೆಸೇಜ್‌’ ಎಂಬ ಸಂದೇಶ ಬರೆಯಲಾಗಿದೆ.

ಚರಕವನ್ನು ಎಸ್‌.ಸಿ. ಶೆಟ್ಟರ್‌ ಮತ್ತು ಸನ್ಸ್‌ ಪ್ರಾಯೋಜಿಸಿದ್ದಾರೆ. ಹುಬ್ಬಳ್ಳಿಯ ಆರ್ಟ್‌ವಾಲಿ ಅವರು ತಯಾರಿಸಿದ್ದು,ಸಮೃದ್ಧ ಭಾರತ ಸಂದೇಶವನ್ನು ಸಾರಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್‌ ಸಿಂಗ್‌ ‘ನಿಲ್ದಾಣ ಸುಂದರವಾಗಿ ಕಾಣುವಂತೆ ಮಾಡಲು ಮತ್ತು ಪರಿಸರ ಸ್ನೇಹಿಯಾಗಿರೂಪಿಸಲು ಶ್ರಮಿಸುತ್ತಿದ್ದೇವೆ.

ಚಿತ್ರಗಳು ಪ್ರಯಾಣಿಕರ ಆಕರ್ಷಣೆಗಷ್ಟೇ ಅಲ್ಲ,ಜನರು ತ್ಯಾಗಗಳನ್ನು ಪ್ರತಿಬಿಂಬಿಸುತ್ತಾರೆ ಎನ್ನುವ ಸಂದೇಶ ನೀಡುವುದು ನಮ್ಮ ಉದ್ದೇಶ’ ಎಂದರು.

Edited By : Nirmala Aralikatti
Kshetra Samachara

Kshetra Samachara

11/12/2020 10:00 am

Cinque Terre

30.45 K

Cinque Terre

3

ಸಂಬಂಧಿತ ಸುದ್ದಿ