ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶಿರೂರು ಕಮಡೊಳ್ಳಿ ರಸ್ತೆ ಅವ್ಯವಸ್ಥೆ ವಾಹನ ಸಂಚಾರಕ್ಕೆ ತಾಪತ್ರೆ

ಕುಂದಗೋಳ : ಈ ಗ್ರಾಮಗಳ ಅಭಿವೃದ್ಧಿ ಕನಸು ಕಾಣೋ ಸರ್ಕಾರಗಳು ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳು ಗಮನಿಸುವಂತೆ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರೋದಿಲ್ಲ ನೋಡಿ. ಈ ಪರಿಣಾಮ ಶಿರೂರು ಕಮಡೊಳ್ಳಿ ಸಂಪರ್ಕ ಕಲ್ಪಿಸುವ ಕೇವಲ ನಾಲ್ಕು ಕಿಲೋ ಮೀಟರ್ ರಸ್ತೆ ಹಾಳಾಗಿ ಹೋಗಿದ್ದು ಜನ ಸಂಚಾರಕ್ಕೆ ತಾಪತ್ರಯ ಉಂಟುಮಾಡುತ್ತಿದೆ.

ಹೌದು ! ಈ ರಸ್ತೆಯ ತಗ್ಗುಗಳಲ್ಲಿ ನೀರು ನಿಂತು ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡೆತಡೆ ಉಂಟಾಗಿದಲ್ಲದೆ, ರಸ್ತೆ ಮೇಲಿನ ಡಾಂಬರು ಕಿತ್ಹೋಗಿ ಕಲ್ಲುಗಳು ಎದ್ದು ವಾಹನಗಳ ಓಡಾಟವೇ ದುಸ್ಥರವಾಗಿದೆ. ರಸ್ತೆಯಲ್ಲಿ ಕಾಣ ಸಿಗುವ ತಗ್ಗುಗಳೆ ರಾತ್ರಿ ವೇಳೆ ವಾಹನಗಳಿಗೆ ಅಪಾಯ ಸೃಷ್ಟಿಸಿವೆ. ಈ ಬಗ್ಗೆ ಗ್ರಾಮಸ್ಥರು ಶಿರೂರು ಗ್ರಾಮ ಪಂಚಾಯಿತಿ ಪಿಡಿಓಗೆ ಹೇಳಿದ್ರೆ ಅವ್ರು ಆ ರಸ್ತೆ ನಮ್ಮ ವ್ಯಾಪ್ತಿಗೆ ಬರೋಲ್ಲಾ ಲೋಕೋಪಯೋಗಿ ಇಲಾಖೆ ಹೋಗ್ರಿ ಅಂದ್ರಂತೆ ನೋಡಿ.

ಈ ಗ್ರಾಮಸ್ಥರ ಅಳಲನ್ನ ಕೇಳಿದ ಪಿಡಿಓ ಸಾಹೇಬ್ರೂ ಈ ತಮ್ಮದೆ ಭಾಷೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಈ ವಿಷಯ ತಲುಪಿಸಿದ್ರೆ ಒಳ್ಳೆಯದಿತ್ತೆನೋ, ಅದೇನೆ ಇರ್ಲಿ ಸ್ವಾಮಿ ಇನ್ನಾರ್ದೂ ಈ ಹಾಳಾದ ಶಿರೂರು ಕಮಡೊಳ್ಳಿ ರಸ್ತೆ ಸರಿಪಡಿಸಿ ಎರೆಡು ಊರಿನ ಜನ ಸಂಚಾರಕ್ಕೆ ಅವಕಾಶ ಮಾಡಿಕೊಡಿ.

Edited By : Nagesh Gaonkar
Kshetra Samachara

Kshetra Samachara

14/11/2020 10:11 am

Cinque Terre

22.44 K

Cinque Terre

0

ಸಂಬಂಧಿತ ಸುದ್ದಿ