ಹುಬ್ಬಳ್ಳಿ: ‘ವಾಸ್ಕೋ– ಹೊಸಪೇಟೆ ಜೋಡಿ ರೈಲು ಮಾರ್ಗ ಯೋಜನೆಯಿಂದ ಗೋವಾದ ನಿವಾಸಿಗಳಿಗೆ ಹಾಗೂ ಅಲ್ಲಿನ ಪರಿಸರಕ್ಕೆ ಯಾವುದೇ ರೀತಿಯಿಂದ ಸಮಸ್ಯೆಯಾಗದು. ಇದು ದಕ್ಷಿಣ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ’ ಎಂದು ನೈರುತ್ಯ ರೈಲ್ವೆ ವಲಯದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ ತಿಳಿಸಿದರು.
ವಿಡಿಯೋ ಕಾನ್ಪರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಅವರು, ‘ಈ ಯೋಜನೆಗೆ ಹೆಚ್ಚುವರಿ ಭೂಸ್ವಾಧೀನ ಮಾಡಿಕೊಳ್ಳುತ್ತಿಲ್ಲ. ನೂರಾರು ಕುಟುಂಬಗಳಿಗೆ ಸಮಸ್ಯೆ
ಯಾಗುತ್ತದೆ ಎನ್ನುವುದರಲ್ಲಿ ಅರ್ಥವಿಲ್ಲ. ಮಡಗಾಂವ್ ಜಿಲ್ಲೆಯ 7 ಕಿ.ಮೀ ವ್ಯಾಪ್ತಿಯ ಮೂರು ತಾಲ್ಲೂಕು
ಗಳ ಕೆಲವು ಮನೆಗಳಿಗೆ ತೊಂದರೆಯಾಗಲಿದೆ. ಅವರಿಗೆ ಸೂಕ್ತ ಪರಿಹಾರ ಸಹ ನೀಡಲಿದ್ದೇವೆ. ಅಲ್ಲದೆ, ಕಲ್ಲಿದ್ದಲು ಸಾಗಾಟಕ್ಕೆ ಜೋಡಿ ಹಳಿ ನಿರ್ಮಾಣ ಮಾಡುತ್ತಿಲ್ಲ. ಪ್ರವಾಸೋದ್ಯಮ ಉತ್ತೇಜನಗೊಳಿಸಲು ಕೈಗೆತ್ತಿಕೊಳ್ಳಲಾಗಿದೆ. ಗೋವಾಕ್ಕೆ ಬರುವ ಪ್ರವಾಸಿಗರಲ್ಲಿ ಶೇ 40 ಮಂದಿ ರೈಲನ್ನೇ ಅವಲಂಬಿಸಿದ್ದಾರೆ’ ಎಂದು ಹೇಳಿದರು.
60 ಸಾವಿರಕ್ಕಿಂತ ಹೆಚ್ಚು ಮರಗಳನ್ನು ಕಡಿಯಲಾಗುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಮಾಹಿತಿ. ಪ್ರಾಥಮಿಕ ಸಮೀಕ್ಷೆ ಪ್ರಕಾರ 10ಸಾವಿರ ಮರಗಳನ್ನು ಕಡಿಯಬೇಕಾಗಬಹುದು. 2010–11ರಲ್ಲಿಯೇ ಕಾಮಗಾರಿ ಆರಂಭವಾಗಿದ್ದು, 2021ರ ಮಾರ್ಚ್ ವೇಳೆ ಮುಕ್ತಾಯವಾಗಲಿದೆ. ಗೋವಾದಲ್ಲಿ 90 ಕಿ.ಮೀ. ಕಾಮಗಾರಿ ಮಾತ್ರ ಬಾಕಿಯಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಇ. ವಿಜಯಾ ಇದ್ದರು.
Kshetra Samachara
12/11/2020 10:21 am